".

Header Ads

"ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನ" ಕುಂಟಾಡಿ ಕಾಲಾವಧಿ ನೇಮೋತ್ಸವ ,ರಥೋತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ, ಸಂಸದ ವಿ. ಸುನಿಲ್ ಕುಮಾರ್, ಮುನಿಯಾಲ್ ಉದಯ್ ಕುಮಾರ್, ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ರಕ್ತೇಶ್ವರಿ ದೈವಸ್ಥಾನಕ್ಕೆ ದಿಗ್ಗಜರ ಭೇಟಿ

"ಶ್ರೀ ಕ್ಷೇತ್ರ ಕುಂಟಾಡಿ"



ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನ  ಜಾತಿ ಭೇದ ಭಾವ ಇಲ್ಲದೆ ಎಲ್ಲರಿಂದಲೂ ಆರಾಧನೆಗೊಳ್ಳುತ್ತಾ ಎಲ್ಲರ ಇಷ್ಟಾರ್ಥ ಪೂರೈಸುವ ಶಕ್ತಿ ,ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಇಡೀ ರಾತ್ರಿ ನಡೆಯುವ ಕಾಲಾವಧಿ ನೇಮೋತ್ಸವ,

  ರಥೋತ್ಸವ,
ನಂದಿಗೋಣ ನೇಮ,ಸರ್ವರ ಆಕರ್ಷಣೆಯ ಕೇಂದ್ರ ಕಂಚೀಲು ಸೇವೆ , ಕುಣಿತ ಭಜನೆ,ಚಂಡಿಕಾಯಾಗ ,ಮಹಾಪೂಜೆ,ಕಟ್ಟೆಪೂಜೆ,ಪಲ್ಲಪೂಜೆ,ನಿತ್ಯವೂ  ಮಹಾ ಅನ್ನ ಸಂತರ್ಪಣೆ,ಹಾಗೂ ಶ್ರೀ ರಕ್ತೇಶ್ವರಿ ಹಾಗೂ ವ್ಯಾಘ್ರ ಚಾಮುಂಡಿ ದೈವಗಳ ಕಾಲಾವಧಿ  ನೇಮೋತ್ಸವವು ಶ್ರದ್ಧಾಭಕ್ತಿಗಳಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು,ಭಕ್ತರು  ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ  ದೇವರನ್ನು ಕಣ್ತುಂಬಿಕೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿದರು.




ಹಾಗೂ  ರಕ್ತೇಶ್ವರಿ ಹಾಗೂ ವ್ಯಾಘ್ರ ಚಾಮುಂಡಿ  ಕುಂಟಾಡಿ ದೈವಸ್ಥಾನದ ಕಾಲಾವಧಿ ನೇಮೋತ್ಸವ ಜಾತ್ರೆ ಸಂದರ್ಭ ಬಿಜೆಪಿ ಸಂಸದ ವಿ. ಸುನಿಲ್ ಕುಮಾರ್, ಈ ಬಾರಿಯ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಶ್ರೀರಾಮ ಸೇನೆಯ ಮುಖಂಡ, ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ದೈವಗಳ ಆಶೀರ್ವಾದಕ್ಕೆ ಪಾತ್ರರಾದರು.




ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರರು, ಗ್ರಾಮಸ್ಥರು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.


Powered by Blogger.