".

Header Ads

ಮಿಗ್-21 ಯುದ್ಧ ವಿಮಾನ ಪತನ – ಇಬ್ಬರು ಸ್ಥಳೀಯರು ಮೃತ್ಯು


ಯುದ್ಧ ವಿಮಾನ ಇಂದು ಬೆಳಿಗ್ಗೆ, ರಾಜಸ್ಥಾನದ ಹನುಮಾನ್‌ಗಢ ಗ್ರಾಮದ ಬಳಿ ಪತನಗೊಂಡಿದ್ದು, ಸದ್ಯದ ಮಾಹಿತಿ ಪ್ರಕಾರ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ. ಓರ್ವ ತೀವ್ರ ಗಾಯಗೊಂಡಿದ್ಧಾರೆ.
ಭಾರತೀಯ ವಾಯುಪಡೆಯ ಮಿಗ್ -21 ( MiG-21) ಯುದ್ಧ ವಿಮಾನ ಇಂದು ಬೆಳಿಗ್ಗೆ, ರಾಜಸ್ಥಾನದ ಹನುಮಾನ್‌ಗಢ ಗ್ರಾಮದ ಬಳಿ ಪತನಗೊಂಡಿದ್ದು, ಸದ್ಯದ ಮಾಹಿತಿ ಪ್ರಕಾರ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ. ಓರ್ವ ತೀವ್ರ ಗಾಯಗೊಂಡಿದ್ಧಾರೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿದ್ದಾರೆ. ಈ ವಿಮಾನ ಇಂದು ಬೆಳಿಗ್ಗೆ ಸೂರತ್ ಗಢದಿಂದ ಟೇಕಾಫ್ ಆಗಿತ್ತು. ಈ ಘಟನೆ ಬಗ್ಗೆ ಭಾರತೀಯ ವಾಯುಪಡೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.
ಸೇನಾ ಹೆಲಿಕಾಪ್ಟರ್ ಘಟನಾ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಇಂದು ಬೆಳಿಗ್ಗೆ ತರಬೇತಿಗಾಗಿ ಹಾರಾಟ ಪ್ರಾರಂಭಿಸಿದ ಮಿಗ್ 21 ವಿಮಾನ, ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ. ಪತನಕ್ಕೆ ನಿಖರವಾದ ಕಾರಣ ಪತ್ತೆ ಹಚ್ಚಲಾಗುತ್ತಿದೆ. ವಿಮಾನ ಹಾರಾಟ ಶುರುವಾದ ಕೆಲವೇ ಕ್ಷಣಗಳಲ್ಲಿ ಪೈಲಟ್, ತುರ್ತು ಪರಿಸ್ಥಿತಿಯನ್ನು ಅನುಭವಿಸಿದರು, ಕೂಡಲೇ ಹಾರಾಟವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಮಾನ ಪತನದ ಬಳಿಕ ಸೂರತ್‌ಗಢದಿಂದ 25 ಕಿಲೋಮೀಟರ್ ದೂರದಲ್ಲಿ ನೆಲಕ್ಕೆ ಬಿದ್ದಿದ್ದ, ಪೈಲಟ್‌ನನ್ನು ಸೇನಾಪಡೆ ರಕ್ಷಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 
 



Powered by Blogger.