".

Header Ads

ಮಣಿಪುರ : ಹಿಂಸಾಚಾರಕ್ಕೆ ಅಧಿಕಾರಿ ಬಲಿ: ಆರ್ಟಿಕಲ್ 355 ಜಾರಿ


ಮಣಿಪುರ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂಫಾಲ್‌ನಲ್ಲಿ ನಿಯೋಜನೆಗೊಂಡ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಇಂಫಾಲ್‌ನಲ್ಲಿ ತೆರಿಗೆ ಸಹಾಯಕರಾದ Sh. ಲೆಟ್ಮಿಂಥಾಂಗ್ ಹಾಕಿಪ್ ಅವರ ಸಾವಿಗೆ ಕಾರಣವಾದ ಹಿಂಸಾಚಾರದ ಭೀಕರ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ. ಯಾವುದೇ ಸಿದ್ಧಾಂತ ಕರ್ತವ್ಯದಲ್ಲಿದ್ದ ಅಮಾಯಕ ಅಧಿಕಾರಿಯ ಹತ್ಯೆಯನ್ನು ಸಮರ್ಥಿಸುವುದಿಲ್ಲ" ಇತ್ತೀಚಿನ ಟ್ವೀಟ್‌ನಲ್ಲಿ ಹೇಳಿದೆ.

ಇನ್ನು ಮಣಿಪುರ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 355ನೇ ವಿಧಿ ಜಾರಿಗೊಳಿಸಿ, ಭದ್ರತೆಯ ಸಂಪೂರ್ಣ ಹೊಣೆ ವಹಿಸಿಕೊಂಡಿದೆ. 355ನೇ ವಿಧಿಯು ಆಂತರಿಕ ಅಡಚಣೆಗಳು ಮತ್ತು ಬಾಹ್ಯ ಆಕ್ರಮಣಗಳ ವಿರುದ್ಧ ರಾಜ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.

Powered by Blogger.