ತೆಂಗಿನ ಮರಕ್ಕೆ ಆಟೋ ರಿಕ್ಷಾ ಡಿಕ್ಕಿ – ಪ್ರಯಾಣಿಕ ಸಾವು
ರಿಕ್ಷಾವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಸಮೀಪ ತಡರಾತ್ರಿ ನಡೆದಿದೆ. ಕುಂದಾಪುರದ ನಿವಾಸಿ ಭಾಸ್ಕರ (33) ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದುರ್ದೈವಿ.ತಡರಾತ್ರಿ ಮೊವಾಡಿ-ತ್ರಾಸಿ ರಸ್ತೆಯಲ್ಲಿ ರಿಕ್ಷಾ ಚಾಲಕ ಗುರುರಾಜ ಅತೀ ವೇಗದಲ್ಲಿ ಆಟೋರಿಕ್ಷಾವನ್ನು ಚಲಾಯಿಸಿದ್ದು ಹಠಾತ್ತನೆ ಬ್ರೇಕ್ ಅದುಮಿದ ಪರಿಣಾಮ ಆಟೋರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ ಮರಕ್ಕೆ ಢಿಕ್ಕಿಯಾಗಿದೆ.
ಆಟೋರಿಕ್ಷಾ ಹಿಂಬದಿ ಕುಳಿತ ಭಾಸ್ಕರ್ ಅವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರ ಸಹಕಾರದೊಂದಿಗೆ ಗಂಗೊಳ್ಳಿ ಆಪತ್ಬಾಂಧವ 24*7 ಅಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಅವರು ಮೃತಪಟ್ಡಿದ್ದಾರೆ ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕ ಗುರುರಾಜ ಪೂಜಾರಿ ಅವರಿಗೂ ಗಾಯಗಳಾಗಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment