ಕಳತ್ತೂರು: ವಾಸು ಬಾಬು ಶೆಟ್ಟಿ ನಿಧನ
ಕಳತ್ತೂರು, ಬರಬೆಟ್ಟು ಹೊಸಮನೆಯ ವಾಸು ಶೆಟ್ಟಿ (85) ಮೇ 30ರಂದು ಕಳತ್ತೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಮೂವರು ಪುತ್ರರು, ಒಬ್ಬಳು ಪುತ್ರಿಯನ್ನು ಅಗಲಿ ದ್ದಾರೆ.ಬೆಂಗಳೂರು ಗಾಂಧಿನಗರ ಹೋಟೆಲ್ ಪೋರ್ಟ್ ಆಫ್ ಪೆವಿಲಿಯನ್ ಮಾಲಕ ಮೋಹನ್ ಎಂ ಶೆಟ್ಟಿ ಬೆಳಪು ಗುತ್ತುಯವರ ಮಾವ,
ಕಳತ್ತೂರು ಕುಶಲಶೇಖರ ಶೆಟ್ಟಿ ಇಂಟರ್‌ನ್ಯಾಶನಲ್ ಆಡಿಟೋರಿಯಂನ ನಿರ್ದೇಶಕರಾಗಿ, ಕುಶಲ ಶೇಖರ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷರಾಗಿ, ಜನಸಂಪರ್ಕ ಜನಸೇವಾ ವೇದಿಕೆ ಗೌರವ ಸಲಹೆಗಾರರಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದು, ಊರಿನ ಧಾರ್ಮಿಕ ಸಮಾರಂಭದಲ್ಲಿ ತೊಡಗಿಸಿ ಕೊಂಡಿದ್ದರು. ಸುಮಾರು 15 ವರ್ಷಗಳಿಂದ ಚಾರಿಟೆಬಲ್ ಟ್ರಸ್ಟ್ ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಲ್ಲಿ ಮುಂಚೂಣಿಯಲ್ಲಿ ಪಾತ್ರ ವಹಿಸುತ್ತಿದ್ದರು.
ವಾಸು ಶೆಟ್ಟಿ ನಿಧಾನಕ್ಕೆ ಮುಂಬೈಯ ಕವಿಶ ಸಾರಿಸ್ ನ್ ಮಾಲಕ ವಿಶ್ವನಾಥ್ ಶೆಟ್ಟಿ ಬೆಳಪು ಗುತ್ತು ದುಃಖಸಂತಪ್ಪ ಸೂಚಿಸಿರುವರು.

Post a Comment