".

Header Ads

ಸುರತ್ಕಲ್ ಅರಂತ ಬೆಟ್ಟು ಗುತ್ತು ಉಲ್ಲಾಯ ಕಾಂತೆರಿ ಜುಮಾದಿ ಪಂಜುರ್ಲಿ ಕಲ್ಲುಟ್ಟಿ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ನೇಮೋತ್ಸವ

ಬದುಕನ್ನು ಧರ್ಮ ಕಾರ್ಯದಲ್ಲಿ  ತೊಡಗಿಸಿಕೊಳ್ಳಿ : ಒಡಿಯೂರು ಶ್ರೀ

(ಚಿತ್ರ, ವರದಿ : ದಿನೇಶ್ ಕುಲಾಲ್)

ಮಂಗಳೂರು :  ಅರಂತಬೆಟ್ಟು ಶ್ರೀ ಉಳ್ಳಾಯ ಮತ್ತು ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಧರ್ಮದೈವಗಳ ನೇಮೋತ್ಸವ ಮತ್ತು ಅರಂತಬೆಟ್ಟುಗುತ್ತು ಧರ್ಮ ಚಾವಡಿಯ ಗೃಹ ಪ್ರವೇಶ ಕಾರ್ಯಕ್ರಮವು ಮೇ 3 ರಿಂದ 6 ರ ವರೆಗೆ .

ಸುರತ್ಕಲ್ ಮಧುಸೂಧನ ಮಯ್ಯರವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಕಾರ್ಯಕ್ರಮ ನಡೆಯಿತು.

ಮೇ  ರಂದು ಬುಧವಾರ ಬೆಳಿಗ್ಗೆ ಗಂಟೆ 8 ರಿಂದ ನಾಗದೇವರಿಗೆ ಪವಮಾನ ಹೋಮ, 25 ಕಲಶ, ತಂಬಿಲ, ಆಶ್ಲೇಷಾ ಪೂಜೆ ಮತ್ತು ಮಹಾಪೂಜೆ.

ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಶಿಲ್ಪಿಗಳಿಂದ ಆಲಯ ಪರಿಗ್ರಹ, ಸ್ವಸ್ತಿ ಪುಣ್ಯಾಹ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜೆ, ದಿಕ್ಪಾಲಕ ಬಲಿ .

 ಮೇ 4 ರಂದು ಬೆಳಿಗ್ಗೆ  ಗಣಹೋಮ, ವೆಂಕಟರಮಣ ದೇವರಿಗೆ ಮುಡಿಪು ಕಟ್ಟುವುದು, ಗೃಹಪ್ರವೇಶ, ಮಿಥುನ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ದೈವಗಳ ದರ್ಶನ, ನವಗ್ರಹ ಶಾಂತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.










ಸಾಯಂಕಾಲ  ದೈವಗಳ ಕಲಶ ಪ್ರತಿಷ್ಠೆ, ಸುದರ್ಶನ ಹೋಮ, ಅಧಿವಾಸ ಹೋಮ, ರಾತ್ರಿ  ಅನ್ನಸಂತರ್ಪಣೆ ನೆರವೇರಿತು. 

ಮೇ 5 ರಂದು ಬೆಳಿಗ್ಗೆ  ಗಣಹೋಮ, ದೈವಗಳಿಗೆ ಕಲಶಾಭಿಷೇಕ, ಪರ್ವಸೇವೆ, ಬೆಳಿಗ್ಗೆ   ಶ್ರೀ ಉಳ್ಳಾಯ ದೈವಕ್ಕೆ ನೇಮೋತ್ಸವ, ಮಧ್ಯಾಹ್ನ  ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಮೈಸಂದಾಯ ದೈವಕ್ಕೆ ನೇಮೋತ್ಸವ, ರಾತ್ರಿ  ಅನ್ನಸಂತರ್ಪಣೆ, ರಾತ್ರಿ ಕಾಂತೇರಿ ಜುಮಾದಿ, ಬಂಟ, ಸರಳ ಜುಮಾದಿ ಬಂಟ ಮತ್ತು ಪಿಲಿಚಾಮುಂಡಿ ದೈವಗಳಿಗೆ ನೇಮೋತ್ಸವ ನಡೆಯಿತು.

ಮಧ್ಯಾಹ್ನ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ  ಅರಂತಬೆಟ್ಟು ಕುಟುಂಬಕರು ನೀಡಿರುವ ಗೌರವವನ್ನು ಸ್ವೀಕರಿಸಿ ಒಗ್ಗಟ್ಟಿನಿಂದ ಕುಟುಂಬ ಬೆಳೆಯಬೇಕು, ದೈವದ ನುಡಿಯಂತೆ ಕುಟುಂಬದ ಮನೆವರೆಲ್ಲರೂ ನಡೆಯಬೇಕು, ಬದುಕಿನಲ್ಲಿ ಧರ್ಮ ಕಾರ್ಯಗಳನ್ನು ಮಾಡಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಐಕಳ ಹರೀಶ ಶೆಟ್ಟಿ, ಉಪಾಧ್ಯಕ್ಷ  ಕರ್ನಿರೆ ವಿಶ್ವನಾಥ್ ಶೆಟ್ಟಿ, ವರ್ಲಿ ಅಪ್ಪಾಜಿ ಬಿಡು ಫೌಂಡೇಶನ್ ಸಂಸ್ಥಾಪಕ ರಮೇಶ್ ಗುರುಸ್ವಾಮಿ, ವಿಕೆ ಗ್ರೂಪ್ ಕಂಪೆನಿಯ ಸುರತ್ಕಲ್ ಮಧ್ಯ ಗುತ್ತು ಕರುಣಾಕರ್ ಶೆಟ್ಟಿ, ಯಕ್ಷದ್ರುವ ಪಟ್ಲ ಪೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ , ಥಾಣೆ ಉದ್ಯಮಿ ಗಳದ, ಜಯಂತ್ ಶೆಟ್ಟಿ, ಕುಶಲ್ ಭಂಡಾರಿ, ಮಧ್ಯ ಗೊತ್ತು ಮೋಹನ್ ಚೌಟ ಮುಂಬೈ ,ಬಂಟರ ಸಂಘ ಮುಂಬೈಯ ಸಾಂಸ್ಕೃತಿಕ ಮತ್ತು ಸಾಹಿತ್ಯ ವಿಭಾಗದ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿ, ಮತ್ತಿತರ ಮುಂಬೈಯ ಉದ್ಯಮಿಗಳು ಉದ್ಯಮಿಗಳು ಸಮಾಜ ಸೇವಕರು ಪಾಲ್ಗೊಂಡಿದ್ದರು.

ಮೇ 6 ರಂದು ಶನಿವಾರ  ಜಾಗೆದ ಪಂಜುರ್ಲಿ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಗಳ ನೇಮೋತ್ಸವ, ರಾತ್ರಿ ಅನ್ನ ಸಂತರ್ಪಣೆ ಗಳು ನಡೆದವು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರನ್ನು  ಅರಂತ ಬೆಟ್ಟು ಗುತ್ತು ಮನೆಯವರು ಗೌರವಿಸಿದರು.

ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಂಗಡಿಗುತ್ತು, ರಮಾನಾಥ ರೈ, ಡಾ. ಎಸ್.ರಾಮಕೃಷ್ಣ ಶರ್ಮಾ,  , ಭುಜಂಗ ಶೆಟ್ಟಿ , ಪ್ರಶಾಂತ್ ಶೆಟ್ಟಿ,  ,  ಲೋಕಯ್ಯ ಶೆಟ್ಟಿ ಮುಂಚೂರು, ಸತೀಶ್ ಮುಂಚೂರು, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜಗನ್ನಾಥ ಶೆಟ್ಟಿ ಬಾಳ, ಸುರೇಂದ್ರ ಶೆಟ್ಟಿ ಸುರತ್ಕಲ್ ಮತ್ತಿತರರು ಸಹಕರಿಸಿದರು.

Powered by Blogger.