".

Header Ads

1.57 ಲಕ್ಷ ಕೋಟಿ ರೂ. ದಾಟಿದ ಜಿಎಸ್‌ಟಿ ಆದಾಯ : ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮತ್ತೆ ನಂ.2

 


ಜಿಎಸ್‌ಟಿ ಸಂಗ್ರಹವು ಸತತ 3ನೇ ತಿಂಗಳಿಂದಲೂ 1.5 ಲಕ್ಷ ಕೋಟಿ ರೂಪಾಯಿಯನ್ನು ದಾಟಿದೆ. ಕಳೆದ ತಿಂಗಳು ಮೇನಲ್ಲಿ ಕೂಡ ಜಿಎಸ್‌ಟಿ ಸಂಗ್ರಹ ಶೇ.12ರಷ್ಟು ಏರಿಕೆಯಾಗಿದ್ದು, 1.57 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದಲ್ಲದೆ ತೆರಿಗೆ ಸಂಗರಹದಲ್ಲಿ ಈ ಬಾರಿಯೂ ಕರ್ನಾಟಕ 2ನೇ ಸ್ಥಾನದಲ್ಲಿದೆ.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಸತತ ಮೂರನೇ ತಿಂಗಳಾದ ಮೇನಲ್ಲೂ 1.50 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಮೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಶೇ.12ರಷ್ಟು ಏರಿಕೆಯಾಗಿ, 1.57 ಲಕ್ಷ ಕೋಟಿ ರೂ.ಗಿಂತ ಅಧಿಕ ಮಟ್ಟದಲ್ಲಿದೆ. ಜುಲೈ 1, 2017ರಂದು ಜಿಎಸ್‌ಟಿ ಜಾರಿಯಾದ ನಂತರ 5ನೇ ಬಾರಿಗೆ ಜಿಎಸ್‌ಟಿ ಮಾಸಿಕ ಆದಾಯವು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಆರ್ಥಿಕ ಚಟುವಟಿಕೆಗಳ ಮುಂದುವರಿಕೆಯನ್ನು ಜಿಎಸ್‌ಟಿ ಸಂಗ್ರಹವು ಪ್ರತಿಬಿಂಬಿಸುತ್ತಿದೆ ಎಂದು ತೆರಿಗೆ ತಜ್ಞರು ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ಜಿಎಸ್‌ಟಿ ಆದಾಯ ದಾಖಲೆಯ ಗರಿಷ್ಠ 1.87 ಲಕ್ಷ ಕೋಟಿ ರೂ.ಗೆ ತಲುಪಿದ್ದರೆ, ಮಾರ್ಚ್ನಲ್ಲಿ1.60 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. 2023ರ ಮೇ ತಿಂಗಳಿನಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್‌ಟಿ ಆದಾಯವು 1,57,090 ಕೋಟಿ ರೂ.ಗಳಷ್ಟಿದೆ. ಕೇಂದ್ರ ಜಿಎಸ್‌ಟಿ 28,411 ಕೋಟಿ ರೂ., ರಾಜ್ಯ ಜಿಎಸ್‌ಟಿ 35,828 ಕೋಟಿ ರೂ. ಮತ್ತು ಇಂಟಿಗ್ರೇಟೆಡ್‌ ಜಿಎಸ್‌ಟಿ 81,363 ಕೋಟಿ ರೂ. ಮತ್ತು ಸೆಸ್‌ 11,489 ಕೋಟಿ ರೂ. ಸಂಗ್ರಹವಾಗಿದೆ.

Powered by Blogger.