ತಲೆಕೆಳಗಾದ ಕಾಂಗ್ರೆಸ್ ಸರ್ಕಾರದ 200 ಯುನಿಟ್ ಫ್ರೀ ಕರೆಂಟ್
ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೇ ನಮ್ಮ ಗ್ಯಾರಂಟಿ ಘೋಷಣೆಗಳನ್ನ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆಯನ್ನ ನೀಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಪಂಚ ಗ್ಯಾರಂಟಿಗಳಿಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.
ಒಬ್ಬ ವೆಕ್ತಿ ಒಂದು ತಿಂಗಳು 50 ಯುನಿಟ್ ಖರ್ಚು ಮಾಡಿದ್ದೇನೆ ಅಂದುಕೊಳ್ಳಿ ಅಥವಾ ಒಂದು ವರ್ಷದ ಅವರೇಜ್ 50 ಯುನಿಟ್ ಅಂದುಕೊಳ್ಳಿ.
ಮುಂದಿನ ತಿಂಗಳು 55 ಯುನಿಟ್ ಅಷ್ಟೇ ಖರ್ಚು ಮಾಡಬಹುದು. ಹೆಂಗೂ 200 ಯುನಿಟ್ ಫ್ರೀ ಇದ್ಯಲ್ಲ ಅಂತ ಅಂದ್ಕೊಂಡು 150 ಯುನಿಟ್ ಖರ್ಚು ಮಾಡಿದರೆ, 95 ಯುನಿಟ್‌ಗೆ ಬಿಲ್ ಬರುತ್ತೆ. ಈ 95 ಯುನಿಟ್‌ಗೆ ಬಿಲ್ ಬರುತ್ತೆ ಅನ್ನೋದನ್ನ ಸಿಎಂ ಸುದ್ದಿಗೋಷ್ಠಿಯಲ್ಲಿ ಮುಚ್ಚಿಟ್ಟಿದ್ದಾರೆ!
ಈ 200 ಯುನಿಟ್ ಫ್ರೀ ಆಗೋದು, ನಾನು ಪ್ರತಿ ವರ್ಷ 10% ಬಳಕೆ ಏರಿಕೆ ಮಾಡ್ತಾ ಹೋಗಿ 200 ಯುನಿಟ್ ತಲುಪಿದರೆ ಮಾತ್ರ! ಅಂದರೆ, 50 ಯುನಿಟ್ ಬಳಕೆ ಮಾಡ್ತಾ ಇರುವವನಿಗೆ 200 ಯುನಿಟ್ ಫ್ರೀ ಆಗ್ಬೇಕು ಅಂದರೆ, ಕನಿಷ್ಠ 10-15 ವರ್ಷ ಬೇಕು! ಅಲ್ಲಿಗೆ, ಮೂರು ಸರ್ಕಾರ ಬಂದು ಹೋಗಿರುತ್ತೆ!
ಆದರೆ, ಯಾರಿಗೆ ಇದು ಅನುಕೂಲ ಅಂದರೆ ಈಗಾಗಲೇ 180-190 ಯುನಿಟ್ ಬಳಕೆ ಮಾಡುತ್ತಿದ್ದವರಿಗೆ ಭಾರಿ ಅನುಕೂಲ. ಒಂದೋ ಎರಡೋ ಬಲ್ಬ್ ಹಾಕಿಕೊಂಡು ಕನಿಷ್ಠ ವಿದ್ಯುತ್ ಬಳಕೆ ಮಾಡುತ್ತಿದ್ದವನಿಗೆ ಇದರಿಂದ ನಷ್ಟ.
ಉಚಿತ ವಿದ್ಯುತ್ ಯೋಜನೆಯೂ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿದೆ. ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ಜನರು ಪಾವತಿಸುವಂತಿಲ್ಲ. ಆದರೆ, ಜುಲೈನಲ್ಲಿ ಬರುವ ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಜನರು ಪಾವತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Post a Comment