ಕಾರ್ಕಳ :-ಮನೆಯೊಂದಕ್ಕೆ ನುಗ್ಗಿದ ಕಳ್ಳರು: 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪರಾರಿ
ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು
ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಬಗ್ಗೆ ಎನ್ ಸುಧಾಕರ ರಾವ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಮೇ 26 ರ ಮಧ್ಯಾಹ್ನದಿಂದ ಮೇ 30 ರ
ಸಂಜೆಯ ನಡುವಿನ ಅವಧಿಯಲ್ಲಿ ನಂದಳಿಕೆ ಗ್ರಾಮದಲ್ಲಿ ಸುಧಾಕರ ರಾವ್ ಅವರು ವಾಸವಿರುವ ಮನೆಯ ಪಕ್ಕದಲ್ಲಿರುವ ಮೂಲಮನೆ ಮೂಡುಮನೆಯ ಕಪಾಟಿನಲ್ಲಿ ಇಟ್ಟಿದ್ದ ಎನ್ ಸುಧಾಕರ ರಾವ್ ರವರ ಹೆಂಡತಿಯ ಅಂದಾಜು 24 ಪವನ್ ತೂಕದ 5 ಲಕ್ಷ ರೂ. ಮೌಲ್ಯದ ಒಡವೆಗಳನ್ನು, 3000 ನಗದು. ಹಾಗೂ ಇತರ ದಾಖಲೆಗಳನ್ನು ಕಳ್ಳರು ಕಳವುಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Post a Comment