".

Header Ads

Aadhaar Card: ಉಚಿತವಾಗಿ ನಿಮ್ಮ ಆಧಾರ್‌ ವಿವರ ಅಪ್ಡೇಟ್‌ ಮಾಡಿಸಲು ಇನ್ನು 8 ದಿನವಷ್ಟೇ ಬಾಕಿ

 


ಆಧಾರ್‌ ಕಾರ್ಡ್‌ (Aadhaar Card Update) ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿರುವವರು ಅದನ್ನು ಉಚಿತವಾಗಿ ಅಪ್ಡೇಟ್‌ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಒಮ್ಮೆಯೂ ಅಪ್ಡೇಟ್‌ ಮಾಡಿಸದೇ ಇರುವವರು ಜೂನ್‌ 14ರ ಒಳಗೆ ಅಪ್ಡೇಟ್‌ ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್ ಹೊಂದಿರುವವರು ಮುಂದಿನ 8 ದಿನಗಳಲ್ಲಿ (ಜೂ.14) ತಮ್ಮ ಆಧಾರ್ ವಿವರಗಳನ್ನು (ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಬದಲಾವಣೆ) ಉಚಿತವಾಗಿ ನವೀಕರಿಸಬಹುದು. ಏಕೆಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ನಾಗರಿಕರಿಗೆ ತಮ್ಮ ಆಧಾರ್‌ನಲ್ಲಿನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಶುಲ್ಕ ವಿಧಿಸುವುದಿಲ್ಲ. ಜೂ.14 ರ ನಂತರ ಆಧಾರ್‌ ಅಪ್ಡೇಟ್‌ ಮಾಡುವವರು ಶುಲ್ಕ ಪಾವತಿಸಬೇಕಾಗುತ್ತಿದೆ.
myaadhaar.uidai.gov.in

Powered by Blogger.