ಹಾವು ಕಚ್ಚಿ ಸ್ನೇಕ್ ನರೇಶ್ ಉರಗ ತಜ್ಞ ಸಾವು :-ಮನೆಯಲ್ಲಿತ್ತು ರಕ್ಷಣೆ ಮಾಡಿದ ನೂರಾರು ಹಾವು
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಸ್ನೇಕ್ ನರೇಶ್ ಮನೆಯಲ್ಲಿ ಹಾವುಗಳ ರಾಶಿ ಕಂಡು ಬಂದಿದ್ದು, ಬ್ಯಾರಲ್, ಚೀಲಗಳಲ್ಲಿ ಸಂಗ್ರಹಿಸಿದ್ದ ನೂರಾರು ಹಾವುಗಳ ರಕ್ಷಣೆ ಮಾಡಲಾಗಿದೆ.
ನರೇಶ್ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಶೀಲನೆಗೆ ಮನೆಗೆ ತೆರಳಿದ ಪೊಲೀಸರಿಗೆ ನೂರಾರು ನಾಗರಹಾವು ಸೇರಿದಂತೆ ಹಾವಿನ ಮರಿಗಳೂ ಸಿಕ್ಕಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಹಾವುಗಳ ರಕ್ಷಣೆ ಮಾಡಿದ್ದಾರೆ. ಮನೆ ಸೇರಿದಂತೆ ಕಾರು, ಸ್ಕೂಟಿಗಳಲ್ಲೂ ನಾಗರಹಾವುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ನಾಗರಹಾವುಗಳನ್ನು ಮನೆಯಿಂದ ದೂರ ಕೊಂಡೊಯ್ದಿದ್ದಾರೆ.

Post a Comment