ಕರ್ನಾಟಕ ಸಂಘ ಅಂಧೇರಿಯ ಗೌರವ ಅಧ್ಯಕ್ಷ ಹ್ಯಾರಿ ಸೀಕ್ವೆರಾ ಅವರಿಗೆ ಮಾತ್ರ ವಿಯೋಗ
ಕರ್ನಾಟಕ ಸಂಘ ಅಂಧೇರಿ ,ಇದರ ಗೌರವ ಅಧ್ಯಕ್ಷ, ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಲ್ಲಿ ಸಕ್ರಿಯರಾಗಿರುವ ,ಸಾಮಾಜಿಕ ಕಾರ್ಯಕರ್ತ ಹ್ಯಾರಿ ಸೀಕ್ವೆರಾ ಅವರ ತಾಯಿ ಆಲಿಸ್ ರೋಜಾರಿಯೋ ಸೀಕ್ವೆರಾ ಅವರು ಮೇ.31 ರಂದು ಮಂಗಳೂರು ಕೈಕಂಬ ಮೂಡು ಪೇರಾರ್ ನ ತನ್ನ ಸ್ವಗ್ರಹದಲ್ಲಿ ವೃದ್ದಾಪದಿಂದ ನಿಧಾನ ಹೊಂದಿದರು.ಅವರಿಗೆ 94 ವರ್ಷ ವಯಸಾಗಿತ್ತು.ಮೃತರು 6 ಪುತ್ರರು ,ಪುತ್ರಿ, ಮೊಮ್ಮಕ್ಕಳು ಅಪಾರ ಬಂಧು-ಬಳಗವನ್ನು ಅಗಲಿರುವರು.
ಸರಳತೆ ಹಾಗೂ ಪರೋಪಕಾರಿ ಮನೋಭಾವ ಹೊಂದಿದ್ದ ಅವರ ನಿಧನಕ್ಕೆ ಅಂಧೇರಿ ಕರ್ನಾಟಕ ಸಂಘದ ಸ್ಥಾಪಕ ಕೃಷ್ಣ ಶೆಟ್ಟಿ, ಅಧ್ಯಕ್ಷ ಭಾಸ್ಕರ್ ಸುವರ್ಣ ಸಸಿಹಿತ್ಲು, ಹಾಗೂ ಪದಾಧಿಕಾರಿಗಳು, ಸದಸ್ಯರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕ್ರಷ್ಣ ಶೆಟ್ಟಿ, ಅಧ್ಯಕ್ಷ ಎಲ್.ವಿ.ಅಮೀನ್ ಹಾಗೂ ಪದಾಧಿಕಾರಿಗಳು, ಸದಸ್ಯರು , ಕೊಂಕಣಿ ವೆಲ್ ಪ್ಯಾರ್ ಎಸೋಸಿಯೇಷನ್ ನ ಸದಸ್ಯರು, ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಪದಾಧಿಕಾರಿಗಳು, ಹೆಸರಾಂತ ಜ್ಯೋತಿಷಿ ಪ್ರವೀಣ್ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.
.jpeg)
Post a Comment