ಅಖಿಲ ಭಾರತ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ನೇತೃತ್ವದಲ್ಲಿ ತೆಲಂಗಾಣದಲ್ಲಿ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್
ಮುಂಬಯಿ : ಛತ್ರಪತಿ ಶಿವಾಜಿ ಮಹಾರಾಜ ಪ್ರಶಸ್ತಿ ಪುರಸ್ಕೃತ, ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮುಂಬಯಿಯ ಉದಯ ಶೆಟ್ಟಿಯವರ ನೇತೃತ್ವದಲ್ಲಿ ಮೇ. 27 ಮತ್ತು 28 ರಂದು ಹೈದರಾಬಾದ್ ತೆಲಂಗಾಣ ದಲ್ಲಿ ಮಾಸ್ಟರ್ಸ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಡೆಯಿತು. ವಿವಿಧ ರಾಜ್ಯಗಳಿಂದ 170 ಲಿಫ್ಟರ್‌ಗಳು ಇದರಲ್ಲಿ ಭಾಗವಹಿಸಿದ್ದರು. ಅರ್ಹ ವಿಜೇತರು 16ನೇ ಆಗಸ್ಟ್ 2023 ರಂದು ಪೋಲೆಂಡ್‌ನಲ್ಲಿ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಾರೆ.
ಈ ವೈಟ್‌ಲಿಫ್ಟಿಂಗ್ ಈವೆಂಟನ್ನು ಆಯೋಜಿಸುವಲ್ಲಿ ಉದಯ ಶೆಟ್ಟಿಯವರ ಶ್ರಮ ಮತ್ತು ಸಮರ್ಪಣೆಗಾಗಿ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಗಣ್ಯರು ಪತ್ರಮುಖೇನ ಉದಯ ಶೆಟ್ಟಿಯವರನ್ನು ಅಬಿನಂದಿಸಿದ್ದು ಇದು ಅತ್ಯುತ್ತಮ ಚಾಂಪಿಯೋಶಿಪ್‌ಗಳಲ್ಲಿ ಒಂದಾಗಿದೆ ಮಾತ್ರವಲ್ಲದೆ ವಿಶ್ವ ದಾಖಲೆಗಳು ಮತ್ತು ಕಾಮನ್‌ವೆಲ್ತ್ ದಾಖಲೆಗಳ ಸಂಖ್ಯೆಯನ್ನು ಛಿದ್ರಗೊಳಿಸಿದೆ.
ಉದಯ ಶೆಟ್ಟಿ ಮತ್ತು ಅವರ ತಂಡವು ವಿವಿಧ ರಾಜ್ಯಗಳ ಹಲವಾರು ಜನರನ್ನು ಈ ಪಂದ್ಯದಲ್ಲಿ
ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದು ಅಭಿನಂದನಾರ್ಹರು.


Post a Comment