ಕಾರ್ಕಳ :-ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಫ್ಯಾಕ್ಟರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳದಲ್ಲಿ ಉದ್ಯಮಿಯೋರ್ವರು ಉದ್ಯಮದಲ್ಲಿ ತೀವ್ರ ಆರ್ಥಿಕ ನಷ್ಟ ಉಂಟಾದ ಕಾರಣ ಉಡುಪಿ ಜಿಲ್ಲೆಯ ಆತ್ಯಹತ್ಯೆಗೆ ಶರಣಾಗಿದ್ದಾರೆ. ಹೆರ್ಮುಂಡೆ ಪದ್ಮಾವತಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಅಜೆಕಾರು ನಿವಾಸಿ ನಕುಲ್ ದಾಸ್ ಪೈ (52) ಆತ್ಮಹತ್ಯೆಗೆ ಶರಣಾದ ಉದ್ಯಮಿಯಾಗಿದ್ದಾರೆ. ತನ್ನ ಫ್ಯಾಕರಿಯಲ್ಲಿ ನೇಣು ಬಿಗಿದು ನಕುಲ್ ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆರ್ಮುಂಡೆಯಲ್ಲಿರುವ ತಮ್ಮ ಫ್ಯಾಕ್ಟರಿಯ ಹಿಂಭಾಗದಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ವ್ಯವಹಾರದಲ್ಲಿ ಆದ ನಷ್ಟವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment