ಖ್ಯಾತ ಸ್ಯಾಕ್ಸೋಫೋನ್ ಗುರು ಅಲೆವೂರು ಸುಂದರ ಸೇರಿಗಾರ ಇನ್ನಿಲ್ಲ
ಸುಂದರ ಸೇರಿಗಾರ್ ಅವರು ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮವಾಗಿ ಸ್ಯಾಕ್ಸೋಫೋನ್ ವಾದನದ ಕಲಿಕೆಯನ್ನು ಆರಂಭಿಸಿದ್ದರು. ಉಡುಪಿ ಮಂಗಳೂರು ಭಾಗದಲ್ಲಿ ಸ್ಯಾಕ್ಸೋಫೋನ್ ಗುರುಗಳಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ಅನ್ನು ಕಲಿಸಿಕೊಟ್ಟಿದ್ದಾರೆ.
ಸುಂದರ ಸೇರಿಗಾರ ಮಹಿಳೆಯರಿಗೆ ಸ್ಯಾಕ್ಸೋಫೋನ್ ತರಬೇತಿ ಯನ್ನು ನೀಡಿದವರಲ್ಲಿ ಪ್ರಥಮತರು. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಲಭಿಸಿತ್ತು. ಕರ್ನಾಟಕ ಮಾತ್ರವಲ್ಲದೇ ಕೇರಳ, ಹೈದರಾಬಾದ್, ತಮಿಳುನಾಡು, ಗೋವಾ, ಮುಂಬಯಿ, ಮತ್ತು ದೇಶದ ವಿವಿಧ ಭಾಗಗಳಲ್ಲಿ ಸ್ಯಾಕ್ಸೋಫೋನ್ ತರಗತಿಗಳನ್ನು ನಡೆಸಿಕೊಟ್ಟದ್ದಾರೆ.
ಇವರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಸುಂದರ ಸೇರಿಗಾರ ಅವರು ಇಂಟರ್ನ್ಯಾಷನಲ್ ವರ್ಚುವಲ್ ಪೀಸ್ ಯುನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಗೌರವ
ವನ್ನು ಕೂಡಾ ಪಡೆದಿದ್ದರು.

Post a Comment