".

Header Ads

ಕೋಟಿ ಗೀತಾ ಯಜ್ಞಕ್ಕೆ ಚಾಲನೆ – ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಹೇಳಿಕೆ , ಪರ್ಯಾಯಕ್ಕೆ ಪ್ರಧಾನಿ ನರೇಂದ್ರ ಮೋದಿ , ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ


 ಜನವರಿಯಲ್ಲಿ ನಡೆಯಲಿರುವ ಪರ್ಯಾಯದ ಸಲುವಾಗಿ ವಿಶ್ವ ಸಂಚಾರ ಮುಗಿಸಿದ್ದು, ಕೋಟಿ ಗೀತಾ ಯಜ್ಞಕ್ಕೂ   ಚಾಲನೆ ನೀಡಲಾಗಿದೆ ಎಂದು ಉಡುಪಿಯ ಶ್ರೀಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಹೇಳಿದರು. ಹಲಿಯ ಪೇಜಾವರ ಶಾಖಾ ಮಠದಲ್ಲಿ ಮಾತನಾಡಿದ ಅವರು, 4ನೇ ಬಾರಿ ಪರ್ಯಾಯ ಪಟ್ಟ ಅಲಂಕರಿಸುತ್ತಿದ್ದು, ಗೀತೆಯ ಸಂದೇಶ ತತ್ವ ಸಾರುವ ಸಲುವಾಗಿ ಜಾಗತಿಕ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧರ್ಮ, ಜಾತಿ ಮೀರಿ ಭಾಗವಹಿಸಬಹುದು ಎಂದರು.

ದೆಹಲಿಯ 
ಪೇಜಾವರ ಶಾಖಾ ಮಠದಲ್ಲಿ ಮಾತನಾಡಿದ ಅವರು, 4ನೇ ಬಾರಿ ಪರ್ಯಾಯ ಪಟ್ಟ ಅಲಂಕರಿಸುತ್ತಿದ್ದು, ಗೀತೆಯ ಸಂದೇಶ ತತ್ವ ಸಾರುವ ಸಲುವಾಗಿ ಜಾಗತಿಕ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧರ್ಮ, ಜಾತಿ ಮೀರಿ ಭಾಗವಹಿಸಬಹುದು ಎಂದರು.

ಆಂದೋಲನದ ಭಾಗವಾಗಿ ಪುಸ್ತಕಗಳನ್ನು ನೀಡಲಾಗುತ್ತಿದ್ದು ಯಾವ ಭಾಷೆಯಲ್ಲಿ ಬೇಕಾದರೂ ಜನರು ಪುಸ್ತಕದಲ್ಲಿ ಗೀತೆಯನ್ನು ಬರೆದು‌ ನಮಗೆ ಕಳುಹಿಸಬಹುದು. ಬಳಿಕ ಅದನ್ನು ನಾವು ವಾಪಸ್ ಜನರಿಗೆ ಮರಳಿಸಲಿದ್ದು, ಅದನ್ನು ಪೂಜೆ ಮಾಡಬೇಕು. ಇದರಿಂದ ಭಗವದ್ಗೀತೆ ಹೆಚ್ಚು ಪಸರಿಸಲಿದೆ. ಆಂದೋಲನದಲ್ಲಿ ಭಾಗಿಯಾಗುವರು ಇತತರೂ ಭಾಗಿಯಾಗುವಂತೆ ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು.

ಕೋಟಿ ಗೀತಾ ಯಜ್ಞ ಸಲುವಾಗಿ ಪಾರ್ಥಸಾರಥಿಯ ಚಿನ್ನದ ರಥವನ್ನು ಮಾಡಿಸುವ ಯೋಜನೆ ರೂಪಿಸಲಾಗಿದೆ. ಪರ್ಯಾಯಕ್ಕೆ ಪ್ರಧಾನಿ ನರೇಂದ್ರ ಮೋದಿ , ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಸಾಮಾಜಿಕ, ಧಾರ್ಮಿಕ ಚಿಂತಕರಿಗೂ ಆಹ್ವಾನ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.

ಭಗವದ್ಗೀತೆ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿದೆ. ಮಾನಸಿಕ ಯಾತನೆ ಮುಕ್ತಿಗೆ ಗೀತೆ ಬಹಳ ಪರಿಣಾಮಕಾರಿಯಾಗಿದೆ. ಗೀತೆಯ ಪ್ರಚಾರ ವಿಶ್ವದಲ್ಲಿ ನಡೆಯಬೇಕು ಹಾಗಾಗಿ ಪ್ರತಿಯೊಬ್ಬರು ಕೂಡ ಈ ಗೀತೆಯ ಯಜ್ಞದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು

Powered by Blogger.