".

Header Ads

`CET' ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾಹಿತಿ

 


ವೃತ್ತಿಪರ ಕೋರ್ಸ್ ಗಳಿಗಾಗಿ ಸಿಇಟಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿ ನೀಡಿದ್ದು, ಪ್ರಮಾಣಪತ್ರ, ಅಂಕ ವಿವರ ಸಲ್ಲಿಕೆಗೆ ಅವಕಾಶ ನೀಡಿದೆ.

ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ವಿಶೇಷ ಪ್ರವರ್ಗಗಳ ಪ್ರಮಾಣ ಪತ್ರ ಮತ್ತು ಸಂಬಂಧಿಸಿದ ದಾಖಲೆಗಳನ್ನು ಇದುವರೆಗೆ ಸಲ್ಲಿಸದೆ ಇರುವವರು ಜೂನ್ 2 ಅಥವಾ ಜೂನ್ 6 ರಂದು ಖುದ್ದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ https://kea.kar.nic.in ಗೆ ಭೇಟಿ ನೀಡಬಹುದು.

ರಾಜ್ಯಪಠ್ಯಕ್ರಮ ಹೊರತುಪಡಿಸಿ ಬೇರೆ ಬೇರೆ ಪಠ್ಯಕ್ರಮಗಳಡಿಯಲ್ಲಿ 2023 ರಲ್ಲಿ 12 ನೇ ತರಗತಿ ಉತ್ತೀರ್ಣರಾಗಿದ್ದು, ಇದುವರೆಗೂ ತಮ್ಮ ಅಂಕಗಳ ವಿವಿವರ ದಾಖಲಸದೇ ಇರುವವರಿಗೆ ಜೂನ್ 3 ರ ಸಂಜೆ 4 ಗಂಟೆಯಿಂದ ಜೂನ್ 6 ರ ಸಂಜೆ 5.30 ರವರೆಗೆ ಮತ್ತೊಮ್ಮೆ ಪ್ರಾಧಿಕಾರದ ಪೋರ್ಟಲ್ ತೆರೆಯಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

Powered by Blogger.