".

Header Ads

ಜುಲೈ 12 : ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ದಲ್ಲಿ ವಿಜ್ರಂಭಣೆಯ ಯಕ್ಷಗಾನ *ಶಿವಶಕ್ತಿ ಪಂಜುರ್ಲಿ*

ನವಿ ಮುಂಬೈ : ಶ್ರೀ ಸಿದ್ದಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ,ಕುಂದಾಪುರ ಇದರ ಕಲಾವಿದರಿಂದ ಜುಲೈ 12 ರಂದು 6 ಗಂಟೆಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ದಲ್ಲಿ ವಿಜ್ರಂಭಣೆಯ ಯಕ್ಷಗಾನ *ಶಿವಶಕ್ತಿ ಪಂಜುರ್ಲಿ* ನಡೆಯಲಿ.  ಕರಾವಳಿ ಕರ್ನಾಟಕದಲ್ಲಿ  ಸುಮಾರು.100 ಕ್ಕೂ ಮಿಕ್ಕಿ ಪ್ರದರ್ಶನ ಕಂಡ  ಉದಯ್ ಕುಮಾರ್ ಕುಂಜತ್ತೂರು ವಿರಚಿತ ಬಹು ಜನ ಮನ ಸೂರೆಗೊಂಡ ಪಂಜುರ್ಲಿ ದೈವದ ವಿಶೇಷ ಕಥಾನಕವಾಗಿದ್ದು ಮುಂಬೈಯಲ್ಲಿ ಪ್ರಪ್ರಥಮ ಬಾರಿಗೆ ಈ ಯಕ್ಷಗಾನ ನವಿ ಮುಂಬಯಿ ಹೋಟೆಲ್ ಮಾಲಕರ ಸಂಘದ ಉಪಾಧ್ಯಕ್ಷರಾದ  ಜಯಪ್ರಕಾಶ್ ಶೆಟ್ಟಿ  ಸಂಯೋಜನೆಯಲ್ಲಿ ನಡೆಯಲಿದೆ.








ಮುಂಬಯಿ ನಗರದ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಇದ್ದು ಎಲ್ಲಾ ಕನ್ನಡ, ತುಳು ಯಕ್ಷಾಭಿಮಾನಿಗಳು ಬಂದು ಯಶಸ್ವಿಗೊಳಿಸುವರೆ ವಿನಂತಿಸಲಾಗಿದೆ.

ತುಳುನಾಡ ಆರಾಧನಾ ಕಲೆಗಳಲ್ಲಿ ರಾಜ ಕಲೆ ಯಕ್ಷಗಾನವು ದೈವಾರಾಧನೆಯ ಪ್ರಸರಣದ ಒಂದು ಭಾಗವೂ ಆಗಿದ್ದು ಪಂಜುರ್ಲಿ ದೈವದ ಹುಟ್ಡು ಮತ್ತು ಕಾರಣೀಕತೆಯನ್ನು ಪಸರಿಸುವ ವಿಜ್ರಂಭಣೆಯ ಕಥಾನಕ *ಶಿವಶಕ್ತಿ ಪಂಜುರ್ಲಿ* ಹಿಮ್ಮೇಳದಲ್ಲಿ ಕೇಳುಗರ ಹೃದಯಕ್ಕೆ ತಂಪೆರಚುವ ಮಧುರ ಧ್ವನಿಯ ಸುಧೀರ್ ಭಟ್ ಪೆರ್ಡೂರು, ಕಂಚಿನ ಕಂಠದ ಗಾನ ಸರದಾರ ಹೊಸಂಗಡಿ ರವಿಂದ್ರ ಶೆಟ್ಟಿ ಭಾಗವತಿಕೆಗೆ ಎನ್ ಜಿ ಹೆಗಡೆ,ಮಂಜುನಾಥ ನಾವಡ ಸಾಥ್ ನೀಡಲಿದ್ದು.ಮುಮ್ಮೇಳದಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ, ಮಂಕಿ ಈಶ್ವರ, ಉಮೇಶ್ ಶಂಕರನಾರಾಯಣ, ಶಿಥಿಲ್ ಶೆಟ್ಟಿ, ಕಣ್ಣಿ ಕಾರ್ತಿಕ್, ಯುವರಾಜ್ ಬೇಡ್ಕಣಿ,ಗಣೇಶ್ ಬೀಜಾಡಿ,ಧನರಾಜ್ ಮುಂತಾದ ಕಲಾವಿದರ ರಂಗು ತುಂಬಲಿದ್ದು ವಿಶೇಷ ಆಕರ್ಷಣೆ ಯಾಗಿ ಪಂಜುರ್ಲಿ ದೈವ 26 ದೊಂದಿಗೆ ಅಬ್ಬರದ ಪ್ರವೇಶ,ಗುಳಿಗ ದೈವದ ಆರ್ಭಟ ಆಟಕ್ಕೆ ಕಳೆ ತರಲಿದ್ದು ಈ ಪ್ರಸಂಗ ಹಟ್ಟಿಯಂಗಡಿ ಮೇಳದಲ್ಲಿ 100  ಕ್ಕೂ ಮಿಕ್ಕಿ ಪ್ರದರ್ಶನ ಕಂಡಿರುತ್ತದೆ.

Powered by Blogger.