".

Header Ads

ಚಂದ್ರಯಾನ-3 ಅಪ್‌ಡೇಟ್: 2ನೇ ಕಕ್ಷೆ ಏರಿಸುವ ತಂತ್ರ ಯಶಸ್ವಿಯಾಗಿದೆ: ಇಸ್ರೋ

 


ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ 2ನೇ ಹಂತದ ಪ್ರಕ್ರಿಯೆಯನ್ನು ಸೋಮವಾರ ಯಶಸ್ವಿಯಾಗಿ ಪೂರ್ಣ ಗೊಳಿಸಲಾಗಿದೆ. ಇದರ ಬಳಿಕ ಈಗ ಬಾಹ್ಯಾಕಾಶ ನೌಕೆಯು 41,603 ಕಿ.ಮೀ. x 226 ಕಿ.ಮೀ. ಕಕ್ಷೆಯಲ್ಲಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೇಳಿದೆ.

ಮಂಗಳವಾರ ಅಪರಾಹ್ನ 2 ಮತ್ತು 3 ಗಂಟೆಯ ನಡುವೆ ಮುಂದಿನ ಹಂತದ ಕಕ್ಷೆ ಎತ್ತ ರಿಸುವ ಪ್ರಕ್ರಿಯೆ ನಡೆಯಲಿದೆ ಎಂದೂ ತಿಳಿಸಿದೆ. ಅದಾದ ಬಳಿಕ ಮತ್ತೆರಡು ಬಾರಿ ಇಂಥದ್ದೇ ಪ್ರಕ್ರಿಯೆ ಯನ್ನು ನಡೆಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆಯು ಭೂಮಿಯ ಗುರುತ್ವ ಬಲದಿಂದ ಹೊರ ಹೋಗಿ ಚಂದ್ರನತ್ತ ಪ್ರಯಾ ಣಿಸು ವಂತೆ ಮಾಡಲಾ ಗುತ್ತದೆ ಎಂದೂ ಇಸ್ರೋ ಮಾಹಿತಿ ನೀಡಿದೆ. ಜು.14ರಂದು ಚಂದ್ರಯಾನ-3 ನೌಕೆಯು ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿತ್ತು.

Powered by Blogger.