".

Header Ads

5 ಲಕ್ಷ ಕುಟುಂಬಗಳಿಗಿಲ್ಲ ಅನ್ನಭಾಗ್ಯ ಗ್ಯಾರಂಟಿ ಹಣ ....!

 



 ಕೇಂದ್ರ ಸರ್ಕಾರ   ಬಡವರಿಗೆ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೆ ಈಗಾಗಲೆ 5 ಕೆಜಿ ಅಕ್ಕಿ ವಿತರಿಸುತ್ತಿದ್ದು,    ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿಯ ಹಣ ಸಂದಾಯ ಮಾಡಲು  5 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ 170 ರೂಗಳನ್ನು ಸೋಮವಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ.

ರಾಜ್ಯಾದ್ಯಂತ ಒಟ್ಟು 1.53 ಕೋಟಿಗೂ ಅಧಿಕ ಪಡಿತರ ಚೀಟಿಗಳಿವೆ. 10 ಲಕ್ಷ ಅಂತ್ಯೋದಯ, 1.72 ಕೋಟಿಗೂ ಅಧಿಕ ಆದ್ಯತಾ (ಬಿಪಿಎಲ್) ಪಡಿತರ, 2.48 ಕೋಟಿ ಎಪಿಎಲ್ ಪಡಿತರ ಚೀಟಿಗಳಿವೆ. ಈ ಪೈಕಿ ಅರ್ಹ 1.37 ಕೋಟಿ ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆಯಾಗಿದ್ದು, ಇವು ಅನ್ನಭಾಗ್ಯದ ಹಣ ಪಡೆಯುವುದು ಗ್ಯಾರಂಟಿ.

ಅನ್ನಭಾಗ್ಯದ ಅಕ್ಕಿಯ ಹಣ ಸಂದಾಯ ಮಾಡಲು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಅರ್ಜಿ ಕರೆದಿಲ್ಲ. ಈಗಾಗಲೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ ಇ-ಕೆವೈಸಿ ಪೂರ್ಣಗೊಳಿಸಿದವರ ಮಾಹಿತಿ ಪಡೆದಿದ್ದು, ಆ ದಾಖಲೆಗಳ ಮೂಲಕವೇ ಹಣ ಸಂದಾಯ ಮಾಡುತ್ತಿದೆ. ಆದರೆ ಅರ್ಹರು ಮಾಸಾಂತ್ಯದೊಳಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಸಬೇಕು. ಜೂನ್ ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದವರು ಮಾತ್ರವೇ ಜುಲೈನಲ್ಲಿ ಹಣ ಪಡೆಯಲು ಅರ್ಹರು ಎಂದು ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಾಜ್ಯದ ಬಹುದೊಡ್ಡ ಜಿಲ್ಲೆ ಬೆಳಗಾವಿಯೊಂದರಲ್ಲೇ 1.74 ಲಕ್ಷ ಪಡಿತರ ಚೀಟಿ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 1 ಲಕ್ಷ ಚೀಟಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯೇ ಆಗಿಲ್ಲ. ಸರ್ಕಾರ ಇ-ಕೆವೈಸಿ ಮಾಡಿಸುವಂತೆ ಜಾಗೃತಿ ಮೂಡಿಸಿದರೂ 15,73,194 ಪಡಿತರ ಚೀಟಿಗಳಿಗೆ ಬ್ಯಾಂಕ್ ಹಾಗೂ ಆಧಾರ್ ಸಂಖ್ಯೆ ಜೋಡಣೆಯಾಗಿಲ್ಲ. ಹೀಗಾಗಿ ಅವರೆಲ್ಲರಿಗೂ ಈ ಬಾರಿಯ ಅನ್ನಭಾಗ್ಯದ ಹಣ ಸಿಗುವ ಗ್ಯಾರಂಟಿಯೇ ಇಲ್ಲ.
Powered by Blogger.