ಜ್ಯೂಸ್ ತೋರಿಸಿ 5 ವರ್ಷ ಪ್ರಾಯದ ಪುಟ್ಟ ಬಾಲಕಿ ಅತ್ಯಾಚಾರ , ಕೊಲೆ - ಕೇರಳದಾದ್ಯಂತ ಆಕ್ರೋಶ
5 ವರ್ಷದ ಪುಟ್ಟ ಬಾಲಕಿಯ ಅತ್ಯಾಚಾರ.ಬಿಹಾರ ಮೂಲದ ದಂಪತಿಗೆ ಸೇರಿದ್ದ 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ ಕಾಮುಕನೊಬ್ಬ ಕಿಡ್ನಾಪ್ ಮಾಡಿ ಅತ್ಯಾಚಾರ ವೆಸಗಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಆಲುವಾದ ಸ್ಥಳೀಯ ಮಾರುಕಟ್ಟೆ ಬಳಿ ಎಸೆದು ಹೋಗಿದ್ದಾನೆ.ಬಾಲಕಿ ನಾಪತ್ತೆಯಾದ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ತಡರಾತ್ರಿ ಶವ ಪತ್ತೆಯಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಕುಟುಂಬ ವಾಸವಿದ್ದ ಕಟ್ಟಡದಲ್ಲೇ ಆರೋಪಿ ವಾಸವಾಗಿದ್ದ. ಪೊಲೀಸರ ಪ್ರಕಾರ, ಆರೋಪಿಗಳು ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.
ಈ ಘಟನೆಗೆ ಕೇರಳದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಸ್ವತಃ ಕೇರಳ ಪೊಲೀಸರೇ ‘ಕ್ಷಮಿಸಿ ಮಗಳೇ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಕೇರಳ ಪೊಲೀಸರು ಬಾಲಕಿಯ ಪೋಷಕರಿಗೆ ಕ್ಷಮೆಯಾಚನೆಯನ್ನೂ ಪೋಸ್ಟ್ ಮಾಡಿದ್ದಾರೆ. “ಮಗುವನ್ನು ಸುರಕ್ಷಿತವಾಗಿ ಪೋಷಕರ ಬಳಿಗೆ ಕರೆತರುವ ಪ್ರಯತ್ನ ವಿಫಲವಾಗಿದೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮಗುವನ್ನು ಅಪಹರಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಮದ್ಯದ ನಶೆ ಇಳಿದ ಅಫ್ಸಾಕ್, ಹಣಕ್ಕಾಗಿ ಮಗುವನ್ನು ಬೇರೆಯವರಿಗೆ ಒಪ್ಪಿಸಿರುವುದಾಗಿ ಹೇಳಿಕೆ ನೀಡಿ ಪೊಲೀಸರ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದ.ಜಾಕೀರ್ ಎಂಬಾತನಿಗೆ ಮಗುವನ್ನು ಒಪ್ಪಿಸಿದ್ದಾಗಿ ಅಸ್ಟಾಕ್ ಮೊದಲು ಪೊಲೀಸರಿಗೆ ತಿಳಿಸಿದ್ದರೂ ಕೊನೆಗೂ ತಾನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ, ವಿಧಿವಿಜ್ಞಾನ ತಜ್ಞರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಸುದೀರ್ಥ 3 ಗಂಟೆಗಳ ಕಾಲ ಪಂಚನಾಮೆ ನಡೆಸಿ ಸಂಜೆ 3ಕ್ಕೆ ಮೃತದೇಹವನ್ನು ಕಳಮಶ್ವೇರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಹಿಸುಕಿ, ಬಾಲಕಿ ಧರಿಸಿದ್ದ
ಬನಿಯನ್ ಸುತ್ತಿ ಉಸಿರುಗಟ್ಟಿಸಿ ಕೊಲೆಗೈದಿರುವುದು ದೃಢಪಟ್ಟಿದೆ. ಮಗುವಿನ ಖಾಸಗಿ ಭಾಗ ಸೇರಿದಂತೆ
ದೇಹದ ಮೇಲೆ ಸಂಪೂರ್ಣ ಗಾಯಗಳು ಪತ್ತೆಯಾಗಿದೆ. ಫೋರೆನ್ಸಿಕ್ ವರದಿಯ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಆರೋಪ ಹೊರಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಲಾಗುವುದು.

Post a Comment