".

Header Ads

ಉಡುಪಿ:- ಮುಂದುವರೆದ ಮಳೆ: ನಾಲ್ವರ ಸಾವು

 


ಅತಿಯಾದ ಮಳೆಯಿಂದಾಗಿ ಅವಘಡಗಳೂ ಸಂಭವಿಸಿದ್ದು,  ರಾಜ್ಯದಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಒಬ್ಬರು ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾರೆ ಕೆಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃತಿಯಾಗಿದೆ. ಇನ್ನೂ ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ವಿದ್ಯುತ್‌ ಕಂಬಗಳು ಧರೆಗುರುಳಿ, ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ಳಾಡಿಯ ಗೋಕುಲ ದಾಸ್‌ ಪ್ರಭು (53) ಸೋಮವಾರ ಕರ್ಕುಂಜೆಯ ತೋಟಿಗೆ ಬಿದ್ದು ಮೃತಪಟ್ಟಿದ್ದಾರೆ. ಹೆಬ್ರಿ ತಾಲೂಕು ಶೇಡಿಮನೆಯ ಬಡಬೈಲು ದರಕಾಶು ಎಂಬಲ್ಲಿ ಬಾಲಕಿ ರಚನಾ (12) ಭಾನುವಾರ ಹೊಳೆಗೆ ಬಿದ್ದು ಮೃತಪಟ್ಟಿದ್ದಾಳೆ.

ಭದ್ರಾವತಿಯ ಶರತ್‌ ಕುಮಾರ್ (23) ಎಂಬುವವರು ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಕೊಚ್ಚಿ ಹೋಗಿದ್ದಾರೆ. ಬಂಡೆಯ ತುದಿಯಲ್ಲಿ ನಿಂತು ಜಲಪಾತ ವೀಕ್ಷಣೆ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Powered by Blogger.