ಗೊರೆಗಾಂವ್ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ದಲ್ಲಿ ಗುರುಪೂರ್ಣಿಮಾ ಮಹಾಪೂಜೆ ಆಚರಣೆ
ಮುಂಬಯಿ: ಗೊರೆಗಾಂವ್ ಪೂರ್ವ ಸಹಕಾರ್ ವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ದಲ್ಲಿ ಗುರು ಪೂರ್ಣಿಮಾ ಮಹಾಪೂಜೆ ನಿಮಿತ್ತ ಜುಲೈ 2 ರಂದು ಬೆಳಿಗ್ಗೆ ಏಕಹಾ ಭಜನೆ ಕಾರ್ಯಕ್ರಮ ನಡೆಯಿತು. ಮರುದಿನ ಜುಲೈ 3ರಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ಏಕಹಾ ಭಜನೆ ಮಂಗಳೋತ್ಸವ ನಂತರ ಸದ್ಗುರು ನಿತ್ಯಾನಂದ ಗುರುಗಳ ಮೂರ್ತಿ ಅಭಿಷೇಕ ಭಜನಾ ಕೀರ್ತನ್, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಪೂಜಾ ಕಾರ್ಯಗಳು ಯಶಸ್ವಿಯಾಗುವಲ್ಲಿಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಗೊರೆಗಾವ್ ಪೂರ್ವ ಗೌರವ ಅಧ್ಯಕ್ಷರಾದ ಮೋಹನ್ ಜಿ ಪೂಜಾರಿ, ಅಧ್ಯಕ್ಷರಾದ ರಘು ಆರ್ ಮೂಲ್ಯ, ಸಂಚಾಲಕರಾದ ಡಾ. ಶೈಲೇಶ್ ಜಿ, ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯಾನ್, ಕೋಶಾಧಿಕಾರಿ ಮುಂಡಪ್ಪ ಮೂಲ್ಯ ಹಾಗೂ ಸಮಿತಿಯ ಸದಸ್ಯರು ಶ್ರಮಿಸಿದರು.
ಪೂಜೆಯಲ್ಲಿ ಗುರುಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ನಿತ್ಯಾನಂದ ಗುರುಗಳ ದರ್ಶನವದೊಂದಿಗೆ ಪೂಜಾ ಕಾರ್ಯಗಳನ್ನು ನಡೆಸಿದರು.




Post a Comment