".

Header Ads

ಸೋಶಿಯಲ್ ಮೀಡಿಯಾದಲ್ಲಿ ಪ್ರೈವೇಟ್ ವಿಡಿಯೋ ವೈರಲ್: ಮನನೊಂದು ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಬಿಕಾಂ ವಿದ್ಯಾರ್ಥಿಗಳು


 ಖಾಸಗಿ ಕ್ಷಣದ ವಿಡಿಯೋ ವೈರಲ್​ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳಿಬ್ಬರು ಸಾವಿನ ಹಾದಿ ಹಿಡಿದಿರುವ ಆಘಾತಕಾರಿ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ಮೃತರನ್ನು ಆಲೂರಟ್ಟಿ ತಾಂಡಾದ ರತನ್ (20) ಮತ್ತು ಜಗಳೂರು ತಾಲೂಕಿನ ಗ್ರಾಮವೊಂದರ ಯುವತಿ ಎಂದು ಗುರುತಿಸಲಾಗಿದೆ.

ಇಬ್ಬರೂ ದಾವಣಗೆರೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳದುಬಂದಿದೆ.

ಕಾಲೇಜಿನ ಟೆರೆಸ್​ ಮೇಲೆ ಇಬ್ಬರು ಏಕಾಂತದಲ್ಲಿರುವುದನ್ನು ಗಮನಿಸಿ, ಅರಿವಿಗೆ ಬಾರದಂತೆ ಪಕ್ಕದ ಕಟ್ಟದಿಂದ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಾಟ್ಸ್​ಆಯಪ್​ಗಳಲ್ಲಿಯೂ ವಿಡಿಯೋ ಹರಿದಾಡಿತ್ತು. ಅಲ್ಲದೆ, ಕೆಲ ವೆಬ್​ಸೈಟ್​ಗಳಲ್ಲೂ ಸುದ್ದಿ ಪ್ರಕಟವಾಗಿತ್ತು.

ಖಾಸಗಿ ವಿಡಿಯೋ ವೈರಲ್ ಆಗಿ, ತಲೆತಗ್ಗಿಸುವಂತಾಗಿದ್ದಕ್ಕೆ ತೀವ್ರ ಮನನೊಂದಿದ್ದ ವಿದ್ಯಾರ್ಥಿನಿ ನಿನ್ನೆ ಆತ್ಮಹತ್ಯೆಗೆ ಶರಣಾದಳು. ಆಕೆಯ ಸಾವಿನ ಸುದ್ದಿ ಕೇಳಿದ ಆಲೂರಟ್ಟಿ ತಾಂಡಾದ ರತನ್ ಸಹ ಸಾವನ್ನಪ್ಪಿದ್ದಾನೆ. ರತನ್​ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದ. ನಿನ್ನೆ ಸಂಜೆ ಆಲೂರಟ್ಟಿ ತಾಂಡಕ್ಕೆ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಈ ಮಧ್ಯೆ, ಮೃತ ವಿದ್ಯಾರ್ಥಿಗಳ ಪೋಷಕರು ಮಕ್ಕಳ ಸಾವಿನ ಬಗ್ಗೆ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.


Powered by Blogger.