".

Header Ads

ಉಡುಪಿ;- ರಾತ್ರಿ ನಿದ್ದೆ ಕಣ್ಣಿನಲ್ಲಿ ನಡೆಯುತ್ತಿದ್ದ ಪುಟ್ಟ ಬಾಲಕಿ,ಕೊರಗಜ್ಜ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ನಂಬಿಕೆ.

 


ಕರಾವಳಿ ಕೊರಗಜ್ಜನ ಮತ್ತೊಂದು ಪವಾಡದ ಬಗ್ಗೆ ಈ ಸುದ್ದಿ ಆಗಿದೆ. ನಿದ್ದೆ ಕಣ್ಣಿನಲ್ಲಿ ನಡೆಯುವ ಅಭ್ಯಾಸ ಇರುವ ಮಗು ಒಂದು ರಾತ್ರಿ ವೇಳೆ ಮನೆಯಿಂದ ಎದ್ದು ರಸ್ತೆಯಲ್ಲಿ ನಡೆದುಕೊಂಡು ಹೋದ ಘಟನೆ ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ನಿನ್ನೆ ರಾತ್ರಿ 3 ಗಂಟೆಗೆ ನಡೆದಿದ್ದು, ಮಗು ಕೊರಗಜ್ಜ ಗುಡಿಯ ನಾಮಫಲಕದ ಹತ್ತಿರ ಬಂದು ನಿಂತಿದ್ದು, ಕೊರಗಜ್ಜನೇ ಮಗುವನ್ನು ಮುಂದೆ ಹೋಗದಂತೆ ತಡೆದಿದ್ದಾನೆ ಎಂದು ಭಕ್ತರ ನಂಬಿಕೆಯಾಗಿದ್ದು, ಇದು ಕೊರಗಜ್ಜನ ಪವಾಡ ಎಂದು ಹೇಳುತ್ತಿದ್ದಾರೆ.ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಬಾಲಕಿಯೊಬ್ಬಳು ನಿದ್ದೆ ಕಣ್ಣಿನಲ್ಲಿ ಮನೆಯಿಂದ ಎದ್ದು ರಸ್ತೆಯವರೆಗೆ ನಡೆದುಕೊಂಡು ಬಂದಿದ್ದಾಳೆ. ರಾತ್ರಿ 3 ಗಂಟೆಗೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದರು. ಬಳಿಕ ಮಗುವನ್ನು ಮಾತಾಡಿಸಿದಾಗ ನಿದ್ದೆ ಕಣ್ಣಿನಿಂದ ನಡೆದುಕೊಂಡು ಬಂದ ವಿಷಯ ಬೆಳಕಿಗೆ ಬಂದಿದೆ. ಬಳಿಕ ಮಗುವನ್ನು ವಿಶ್ವ ಅವರು ಮರಳಿ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮರೆದಿದ್ದಾರೆ.ಇದು ಕೊರಗಜ್ಜನ ಪವಾಡ ಎನ್ನುತ್ತಿದ್ದಾರೆ ಸ್ಥಳೀಯರು.

Powered by Blogger.