".

Header Ads

ಡೊಂಬಿವಲಿಯಲ್ಲಿ ಯಕ್ಷಗಾನ "ದಕ್ಷಯಜ್ನ ಮೀನಾಕ್ಷಿ ಕಲ್ಯಾಣ"



ಕಲಾ ಪೋಷಕರ ಸಹಕಾರ ದಿಂದ ನಗರದಲ್ಲಿ ಯಕ್ಷಗಾನ ಉಳಿದಿದೆ. - ಪ್ರಕಾಶ್ ಭಟ್ ಕಾನಂಗಿ

ತುಂಬಾ ಜನ ಈ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನನಗೆ ತುಂಬಾ ಸಹಕಾರ ವನ್ನು ನೀಡಿದ್ದಾರೆ,  ಅವರೆಲ್ಲರಿಗೂ ಕೃತಜ್ಞತೆಗಳು, ಯಾವುದೇ ಕಾರ್ಯಕ್ರಮ ವನ್ನು ಆಯೋಜಿಸಲು ದಾನಿಗಳ ಸಹಕಾರ ಬಹಳ ಅಗತ್ಯ, ಇಂತಹ  ಕಲಾ ಪೋಷಕರು ಇರುವುದರಿಂದ ಮಹಾನಗರದಲ್ಲಿ ಯಕ್ಷಗಾನ ಉಳಿದಿದೆ ಎಂದು  ಪಲ್ಲವ ಗಾಣಿಗ ಹೇರಂಜಾಲು ಹಾಗೂ ನಾಗಶ್ರೀ ಜಿ ಎಸ್ ತಂಡದ ಸಂಚಾಲಕಲಾಗಿರುವ ಹೇರಂಜಾಲು ಯಕ್ಷಬಳಗ ಹಾಗೂ ಟೀಮ್ ಉತ್ಸಾಹಿ ಬೆಂಗಳೂರು ಇವರಿಂದ  ದಿನಾಂಕ ಜುಲೈ 23 ರ ರವಿವಾರ ಸಂಜೆ   ಶಿವಂ ಹಾಲ್ (ಮೆಜೆಸ್ಟಿಕ್ ಬೀಕ್ವೆಸ್ಟ್ ಹಾಲ್) ಎಲ್ ಐ ಸಿ ಆಫೀಸ್ ನ ಹತ್ತಿರ, ಪೈರ್ ಬ್ರಿಗೇಡ್ ರಸ್ತೆ, ಡೊಂಬಿವಲಿ ಪೂರ್ವ ದಲ್ಲಿ ಪ್ರದರ್ಶನಗೊಂಡ ಯಕ್ಷಗಾನ  "ದಕ್ಷಯಜ್ನ ಮೀನಾಕ್ಷಿ ಕಲ್ಯಾಣ" ದ ಮಧ್ಯಂತರ ದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿಯ ಪ್ರದಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ  ಮಾತನಾಡಿದರು. 

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ರಾದ ಇಂದ್ರಾಲಿ ದಿವಾಕರ್ ಶೆಟ್ಟಿ ಮಾತನಾಡುತ್ತ ಡೊಂಬಿವಲಿಯಲ್ಲಿ ತುಂಬಾ ಕಲಾಭಿಮಾನಿಗಳು ಇದ್ದಾರೆ ಆದ್ದರಿಂದ ಇಲ್ಲಿ ತುಂಬಾ ಕಾರ್ಯಕ್ರಮಗಳು ನಡೆಯುತ್ತದೆ, ಅದರಲ್ಲೂ ವಿಶೇಷವಾಗಿ ಯಕ್ಷಗಾನ, ಯಕ್ಷಗಾನ ಇನ್ನಷ್ಟು ಬೆಳೆಯಲಿ ಎಂದರು.

ತಂಡದ ಸಂಚಾಲಕಿ ನಾಗಶ್ರೀ ಜಿ ಎಸ್ ಅವರು ಮಾತನಾಡುತ್ತ ಡೊಂಬಿವಲಿ ಯಲ್ಲಿ ಈ ಕಾರ್ಯಕ್ರಮ ವನ್ನು ಆಯೋಜಿಸಿದ ಎಲ್ಲರಿಗೂ ಧನ್ಯವಾದಗಳು, ಮುಂದೆಯೂ ಕೂಡಾ ಇದೆ ರೀತಿಯಲ್ಲಿ ಸಹಕಾರ ಇರಲಿ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕದ ಕರಾವಳಿಯ ಶ್ರೇಷ್ಟ ಮತ್ತು ಶ್ರೀಮಂತ ಕಲೆಯಾದ ಯಕ್ಷಗಾನ ಕಲೆಯನ್ನು ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ಉಳಿಸಿ ಬೆಳೆಸಲು ಹಗಲು ರಾತ್ರಿ ಶ್ರಮಿಸುತ್ತಿರುವ ರಾಧಾಕೃಷ್ಣ ಶನೀಶ್ವರ ಮಂದಿರದ ಪ್ರಧಾನ ಅರ್ಚಕ, ಹವ್ಯಾಸಿ ಯಕ್ಷಗಾನ ಕಲಾವಿದ, ಕಲಾ ಪೋಷಕ ಶ್ರೀ ಪ್ರಕಾಶ ಭಟ್ ಕಾನಂಗಿ ಹಾಗೂ ವ್ಯವಸ್ಥಾಪನೆಯಲ್ಲಿ ಕಲಾ ರಸಿಕ ಕಲಾರಾದಕರಾದ ಶ್ರೀ ರಾಜೇಶ್ ಕೋಟ್ಯಾನ್ ಹಾಗೂ ಸುಪ್ರಸಿದ್ದ ಕಲಾ ಸಂಘಟರು ಕಲಾಪ್ರಿಯರಾದ ವಿಜಯ ಶೆಟ್ಟಿ  ಸಜೀಪಗುತ್ತು ಇವರನ್ನು ಸನ್ಮಾನಿಸಲಾಯಿತು ಮತ್ತು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಲ್ಲಿ ಸಂಪೂರ್ಣ ಸಹಕಾರ ನೀಡಿರುವ ಯಕ್ಷಕಲಾ ರಸಿಕರು ಡೊಂಬಿವಲಿಯ ರೂವಾರಿ ಸೀತಾರಾಮ್ ಶೆಟ್ಟಿ ಯವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಬಂಟರ ಸಂಘ ಮುಂಬಯಿಯ  ಪಶ್ಚಿಮ ಉಪನಗರ ಸಮನ್ವಯಾಧಿಕಾರಿ ಸುಬ್ಬಯ್ಯ ಶೆಟ್ಟಿ, ಶ್ರೀ ಜಗದಂಬ ಮಂದಿರ ಡೊಂಬಿವಲಿ  ಗೌರವ ಅಧ್ಯಕ್ಷರು ಹರೀಶ್ ಡಿ ಶೆಟ್ಟಿ, ತುಳುಕೂಟ ಡೊಂಬಿವಲಿಯ ಅಧ್ಯಕ್ಷರಾದ ಹೇಮಂತ್ ಶೆಟ್ಟಿ ಕಾವೂರು ಗುತ್ತು, ಕರ್ನಾಟಕ ಸಂಘ ಡೊಂಬಿವಲಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಆನಂದ್ ಶೆಟ್ಟಿ ಎಕ್ಕಾರು,ಬಿಲ್ಲವರ ಅಸೋಸಿಯೇಶನ್ ಮುಂಬಯಿ ಜೊತೆ ಕಾರ್ಯದರ್ಶಿ ರವಿ ಸನಿಲ್ ,  ಶ್ರೀ ಜಗದಂಬ ಮಂದಿರ ಡೊಂಬಿವಲಿ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷರಾದ ವಿಜಯ್ ಬಿ ಶೆಟ್ಟಿ, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿಯ ಅಧ್ಯಕ್ಷರಾದ ಸೋಮನಾಥ ಪೂಜಾರಿ, ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿಯ ಅಧ್ಯಕ್ಷರಾದ ರವಿ ಸುವರ್ಣ, ಭಾರತ್ ಕೋ ಆಪ್ ಬ್ಯಾಂಕ್ ಡೊಂಬಿವಲಿ ಶಾಖೆಯ ಮ್ಯಾನೇಜರ್ ರಾದ ರಮೇಶ್ ಸುವರ್ಣ, ದೇವಾಡಿಗ ಸಂಘ ಡೊಂಬಿವಲಿ ವಲಯದ ಮಾಜಿ ಕಾರ್ಯಾಧ್ಯಕ್ಷ ಹೇಮಾನಂದ ದೇವಾಡಿಗ, ಶಿವಂ ಹಾಲ್ ನ ಪಾಲುದಾರರಾದ ಪ್ರೇಮಾನಂದ ಶೆಟ್ಟಿ,  ಹೋಟೆಲ್ ಆನಂದ್ ಭವನ್ ಡೊಂಬಿವಲಿಯ ಶರಣ್ ರೈ, ದಿವ್ಯಾ ಕ್ಯಾಟರರ್ ಡೊಂಬಿವಲಿಯ ಸತೀಶ್ ಪೂಜಾರಿ, ಕಲಾ ಪೋಷಕರಾದ ದಿನೇಶ್ ಪೂಜಾರಿ, ರಾಜು ಮೊಗವೀರ, ಜಗದಂಬ ಮಂದಿರದ ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ ಉಪಸ್ಥಿತರಿದ್ದರು.

ಯುವ ಕಲಾವಿದ ಚಿನ್ಮಯ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರೆ, ಯಕ್ಷಕಲಾ ರಸಿಕರು ಡೊಂಬಿವಲಿ ಇವರು ಸಹಕರಿಸಿದರು.

Powered by Blogger.