".

Header Ads

ಕರಾವಳಿ ಜಿಲ್ಲೆಯಲ್ಲಿ ಮಿತಿಮೀರಿದ ಪವರ್ ಕಟ್ , ಕಾಂಗ್ರೆಸ್ ಫ್ರೀ ಭಾಗ್ಯಕ್ಕಾಗಿ ಚಿಕ್ ಪುಕ್ ಸರ್ಕಾರ ನಡೆಸುತ್ತಿದೆ ಜನರ ವ್ಯಾಪಕ ಆಕ್ರೋಶ

 


ಕರ್ನಾಟಕದಲ್ಲಿ ಸಿದ್ದರಾಮಯ್ಯ ಆಡಳಿತ ಬಂದಾಗಿಂದ ವಿದ್ಯುತ್ ಸಮಸ್ಯೆಯನ್ನು ಎದುರಿಸುವಂಥಾಗಿದೆ .  ದಿನಕ್ಕೆ ಅರ್ಧ ಗಂಟೆ ಹೋಗುವ ಕರೆಂಟ್ ಈಗ ಅರ್ಧ ಗಂಟೆಗೆ 5 ಬಾರಿ ಹೋಗುತ್ತಿದ್ದೆ. ಫ್ರೀ ಭಾಗ್ಯಕ್ಕಾಗಿ ಈಗ ಕಾಂಗ್ರೆಸ್  ಚಿಕ್ಪುಕ್ ವಿದ್ಯುತ್ ಸರ್ಕಾರ ನಡೆಸುತ್ತಿದೆ ,  ಕರಾವಳಿ ಭಾಗದಲ್ಲಿ ಕರೆಂಟೇ ಇಲ್ಲದಂತಾಗಿದೆ ,ವಿದ್ಯುತನ್ನೇ ನಂಬಿಕೊಂಡು ಉದ್ಯೋಗವನ್ನು ಮಾಡಿಕೊಂಡಿರುವ ಮಾಲೀಕರಿಗೆ ತುಂಬಾನೇ ನಷ್ಟವಾಗಿದೆ, ಯಾವುದೇ ತೊಂದರೆ ಇಲ್ಲದೆ ಕರೆಂಟ್ ಬಾರಿ ಬಾರಿ ಆಗಿ ತೆಗೆಯುತ್ತಿದ್ದಾರೆ ಎಂದು ಗ್ರಾಹಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ ಸುನಿಲ್ ಕುಮಾರ್ ಇಂಧನ ಸಚಿವರು ಇರುವಾಗ ಯಾವುದೇ ಇಂತಹ ಸಮಸ್ಯೆ ಎಲ್ಲಿಯೂ ಆಗಲಿಲ್ಲ, ಈಗಿನ ಸರ್ಕಾರ ಬಂದ ಮೇಲೆ ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ ಅಂಗಡಿ ಮಾಲೀಕರು ಈ ಬಗ್ಗೆ ತುಂಬಾನೇ ಬೇಸರ ವ್ಯಕ್ತಪಡಿಸಿದ್ದಾರೆ,  ಇವರ ಫ್ರೀ   ಭಾಗ್ಯದ ಹೆಸರಲ್ಲಿ ನಮಗೆ ವಿದ್ಯುತ್ ಇಲ್ಲದಂತಾಗಿದೆ, ಹೀಗೆ ಎಲ್ಲ ಮಾಡುವಾದರೆ ಕೈ ಸರ್ಕಾರಕ್ಕೆ ಫ್ರೀ ಕೊಡಲು ಯಾರು ಹೇಳಿದ್ದು , ಇಂತಹ ಸಮಸ್ಯೆ ಜನರಿಗೆ ಕೊಟ್ಟು ಫ್ರೀ ಭಾಗ್ಯ ಕೊಡುವುದಾದರೆ ಯಾತಕ್ಕೆ , ವಿದ್ಯುತ್ ಸರಿಯಾಗಿ ಕೊಡದಿದ್ದರೆ ಆಫೀಸ್ ಹೋಗುವವರಿಗೆ, ಮಕ್ಕಳ ಸ್ಕೂಲ್, ಅಡುಗೆ, ಸರಿಯಾದ ಟೈಮ್ ಗೆ ಆಗುವುದಿಲ್ಲ ಮಕ್ಕಳು ಓದು ಕೂಡ ಸಮಸ್ಯೆ ಆಗುತ್ತೆ, ಮಳೆಗಾಲದಲ್ಲಿ ಶಾಲೆ ಕೊಠಡಿ ಕತ್ತಲೆ ಆವರಿಸಿ ಇರುತ್ತೆ, ಇದರಿಂದ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ , ವಿದ್ಯುತ್ ದರದಲ್ಲಿ ತುಂಬಾನೇ ಹೆಚ್ಚಾಗಿದೆ ಇದರಿಂದ ಎಲ್ಲಾ ರೀತಿಯ ಸಮಸ್ಯೆಯನ್ನು ಎದುರಿಸ ಬೇಕಾಗಿದೆ, ಈ ಫ್ರೀ ಭಾಗ್ಯದ ಹೆಸರಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಂದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ

Powered by Blogger.