ಉಡುಪಿ ಕಾಲೇಜ್ ವಿಡಿಯೋ ಪ್ರಕರಣದ ಹಿಂದೆ ದೊಡ್ಡ ಷಡ್ಯಂತರ ಅಡಗಿದೆ :- ವಿ ಸುನಿಲ್ ಕುಮಾರ್
ಶೌಚಾಲಯದಲ್ಲಿ ಮೂರು ಜನ ಮುಸಲ್ಮಾನ್ ಯುವತಿಯರು ಮೊಬೈಲ್ ಮುಖಾಂತರ ವಿಡಿಯೋ ಚಿತ್ರೀಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಲಾಗಿದೆ, ಈ ಹಿಂದೆ ದೊಡ್ಡ ಷಡ್ಯಂತರ ಅಡಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದನ್ನು ಹಗುರವಾಗಿ ತೆಗೆದುಕೊಳ್ಳುವ ಕೆಲಸ ಮಾಡಬಾರದು, ಸಮಗ್ರವಾದ ತನಿಖೆಯನ್ನು ಮಾಡಬೇಕು ಈ ಹಿಂದೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಹಿಜಬ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ ಅದರ ಹಿಂದೆ ಯಾವ ಶಕ್ತಿ ಗಳು ಇವೆ ಅಂತ ,ಆದರೆ ಈಗ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವಷ್ಟರಲ್ಲಿ ಮಾನಸಿಕ ಖಿನ್ನತೆ ಆ ವಿದ್ಯಾರ್ಥಿಗಳಿಗೆ ಬರುತ್ತಿದೆ ಅಂದರೆ ಅದರ ಹಿಂದೆ ಷಡ್ಯಂತರ ಹಾಗೂ ಸಂಘಟನೆಗಳು ಕೆಲಸ ಮಾಡುತ್ತದೆ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ ತಕ್ಷಣ ಸರ್ಕಾರ ಆ ವಿದ್ಯಾರ್ಥಿಗಳ ಮೇಲೆ ಮುಖದ್ದಮೆ ದಾಖಲಿಸುವುದು ಮಾತ್ರವಲ್ಲ ಇದರ ಹಿಂದೆ ಇರುವ ಶಕ್ತಿಯನ್ನು ಬಯಲಾಗಬೇಕಿದೆ, ಜಿಲ್ಲಾಡಳಿತ ಹಾಗೂ ಮಹಿಳಾ ಆಯೋಗ ಸಹಕಾರ ಕೊಡಬೇಕು, ಇದರ ವಿರುದ್ಧ ಧ್ವನಿ ಎತ್ತಿದವರ ಮನೆಗೆ ಹೋಗುತ್ತಾರೆ ಅಂದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ವಿ ಸುನಿಲ್ ಕುಮಾರ್ ಎಂದರು.


Post a Comment