".

Header Ads

ಉಡುಪಿ ವಿಡಿಯೋ ಪ್ರಕರಣ – ಕಾಲೇಜಿನ ವಿರುದ್ದ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಕ್ಕೆ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ



 ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ವಿಧ್ಯಾರ್ಥಿನಿಯ ವಿಡಿಯೋ ಪ್ರಕರಣಕ್ಕೆ ಸಂಬಂದಿಸಿದಂತೆ ಕಾಲೇಜಿನ ವಿರುದ್ದ ಮಾತನಾಡಿದ ವಿಧ್ಯಾರ್ಥಿನಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳು ಬರುತ್ತಿದ್ದು,. ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯ ಖಾಸಗಿ ಕಾಲೇಜಿನ   ಶೌಚಾಲಯದಲ್ಲಿ ವಿದ್ಯಾರ್ಥಿನಿಯ  ವಿಡಿಯೋ ಚಿತ್ರೀಕರಣ  ಮಾಡಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿ ಪ್ರತಿಭಟನೆಯಲ್ಲಿ ಕಾಲೇಜಿನ ಅವ್ಯವಸ್ಥೆಗಳ ಹೇಳಿದ್ದಳು.

ಈ ಹಿನ್ನೆಲೆ ಜುಲೈ 28 ರಂದು ಇನ್ಸ್ಟಾಗ್ರಾಮ್​ನಲ್ಲಿ ಜಿಗರ್ ಕೋಬ್ರಾ ಎಂಬ ಹೆಸರಿನ ಖಾತೆಯಿಂದ ಬೆದರಿಕೆ, ಕೆಟ್ಟ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಇದು ವಿದ್ಯಾರ್ಥಿನಿಯ ಮಾನಸಿಕ ನೆಮ್ಮದಿಗೆ ಭಂಗ ತಂದಿದೆ. ಈ ವಿಚಾರ ಹಿಂದೂ ಸಂಘಟನೆಗಳಿಗೆ ತಿಳಿದಿದೆ. ನಂತರ ಹಿಂದೂ ಸಂಘಟನೆಗಳು ಸಂದೇಶದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಸ್‌ಪಿ ಜೊತೆ ಸಮಾಲೋಚನೆ ಮಾಡಿದ ಬಳಿಕ ಕೆಟ್ಟ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದವರ ಮೇಲೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Powered by Blogger.