ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ಮಕ್ಕಳಾಟ ಆಗಿರಬಹುದು – ಶಾಸಕ ಯಶಪಾಲ್ ಸುವರ್ಣ
ಉಡುಪಿ ಜಿಲ್ಲೆಯ ನೇತ್ರಜ್ಯೋತಿ ಕಾಲೇಜಿನ ಟಾಯ್ಲೆಟ್ ನಲ್ಲಿ ವಿಧ್ಯಾರ್ಥಿನಿಯರ ವಿಡಿಯೋ ತೆಗೆದ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಬಿಜೆಪಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಕಡಿಯಾಳಿ ಬಿಜೆಪಿ ಕಚೇರಿಯಿಂದ ಬನ್ನಂಜೆ ಎಸ್.ಪಿ ಕಚೇರಿಯವರಿಗೆ ಪ್ರತಿಭಟನಾ ಮೆರೆವಣಿಗೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, “ಇದು ತಮಾಷೆಯ ವಿಚಾರವಲ್ಲ.ಇದು ನಮ್ಮ ಹೆಣ್ಣುಮಕ್ಕಳ, ನಮ್ಮ ಮಕ್ಕಳ ಭವಿಷ್ಯದ ವಿಚಾರ,ಇದನ್ನು ಹಗುರವಾಗಿ ನಿರ್ಲಕ್ಷದಿಂದ ಮಾತಾಡಬಾರದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸುಮ್ಮನಿರುವುದಿಲ್ಲ. ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ಮಕ್ಕಳಾಟ ಆಗಿರಬಹುದು ಎಂದಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರೀ ವಿರೋಧ ವ್ಯಕ್ತಲಾಗಿದೆ.
ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಕಿವಿ ಮತ್ತು ಮೂಗಿಲ್ಲದಂತೆ ವರ್ತಿಸುತ್ತಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡಲು ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿರುವುದು ಯಾರು ಮತ್ತು ಹಿಂದೆ ಯಾರಿದ್ದಾರೆಂದು ಸಂಪೂರ್ಣ ತನಿಖೆಯಾಗಬೇಕು. ಇದರ ಹಿಂದೆ ಪಿಎಫ್ ಐ ಮಹಿಳಾ ಘಟಕದ ಕೈವಾಡವೂ ಇರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಆಗ್ರಹಿಸಿದರು.
Post a Comment