".

Header Ads

ಇಂದು ಐರೋಲಿಯಲ್ಲಿ "ಶ್ರೀ ದೇವಿ ಮಹಾತ್ಮೆ" ಪುಣ್ಯ ಪ್ರಸಂಗ ಯಕ್ಷಗಾನ

ಅಜೆಕಾರು ಕಲಾಭಿಮಾನಿ ಬಳಗ (ರಿ) ಮುಂಬಯಿ ಇವರ ಸಂಯೋಜನೆಯಲ್ಲಿ ಜುಲೈ 31 ರ ಸೋಮವಾರ ಸಂಜೆ ನಾಲ್ಕು ಗಂಟೆಗೆ ನವಿಮುಂಬಯಿ  ಐರೋಲಿ ಸೆಕ್ಟರ್ 15 ರ ಹೆಗ್ಗಡ ಭವನ ಸಭಾಗ್ರಹದಲ್ಲಿ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ತಂಡ ಬಾಳ - ಕಾಟಿಪಲ್ಲ ತಂಡದ ಕಲಾವಿದೆಯರಿಂದ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಅವರ ನಿರ್ದೇಶನದಲ್ಲಿ "ಶ್ರೀ ದೇವಿ ಮಹಾತ್ಮೆ" ಪುಣ್ಯ ಪ್ರಸಂಗ ಯಕ್ಷಗಾನವು ಪ್ರದರ್ಶಿಸಲ್ಪಡಲಿದೆ.

ಈ ಸಂದರ್ಭದಲ್ಲಿ ತಂಡದ ಐದನೇ ವರ್ಷದ ಮುಂಬೈ ಪ್ರವಾಸದ ಸಮರೋಪ ಸಮಾರಂಭವು ಜರುಗಲಿದೆ. 

ಕಲಾಪೋಷಕ ಹಾಗೂ ಪಟ್ಲ ಪೌಂಡೇಶನ್ ನ ಗೌರವ ಅಧ್ಯಕ್ಷರಾದ ಕನ್ಯಾನ ಸದಾಶಿವ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಯ ಧರ್ಮದರ್ಶಿಗಳಾದ ಅಣ್ಣಿ ಸಿ ಶೆಟ್ಟಿ ಹಾಗೂ ಗೌರವ ಅತಿಥಿಗಳಾಗಿ ಹೆಗಡೆ ಸೇವಾ ಸಂಘ (ರಿ) ಮುಂಬಯಿಯ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಹೆಗಡೆ, ಬಂಟರ ಸಂಘ ಮುಂಬಯಿ ಪೂರ್ವ ವಲಯದ ಸಮನ್ವಯಕರಾದ ಐಕಳ ಗುಣಪಾಲ್ ಶೆಟ್ಟಿ, ಹೋಟೆಲ್ ಅಶ್ವಿತ್ ನ ಸಂಜೀವ ಎನ್ ಶೆಟ್ಟಿ, ಜಿ ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಭಾಂಡೂಪ್ ನ ಕಾರ್ಯಾಧ್ಯಕ್ಷರಾದ ಶಂಕರ್ ಶೆಟ್ಟಿ, ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಹರೀಶ್ ಶೆಟ್ಟಿ ಪಡುಬಿದ್ರಿ, ತುಳುಕೂಟ ಐರೋಲಿಯ ಅಧ್ಯಕ್ಷರಾದ ನಾಗೇಶ್ ಶೆಟ್ಟಿ ಬೈಕಾಡಿ ಹೆದ್ದಾರಿ ಮನೆ, ತುಳುಕೂಟ ಐರೋಲಿಯ ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಮುಲ್ಕಿ ಉಪಸ್ಥಿತರಿರುವರು.

 ಈ ಸಂದರ್ಭದಲ್ಲಿ ಕಲಾಪೋಷಕ ಹಾಗೂ ಪಟ್ಲ ಪೌಂಡೇಶನ್ ನ ಗೌರವ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ,  ಮುಂಬೈ ಉದ್ಯಮಿ ಮತ್ತು ಹವ್ಯಾಸಿ ಯಕ್ಷಗಾನ ಕಲಾವಿದ ಸತೀಶ್ ಶೆಟ್ಟಿ ಕೊಟ್ರಪಾಡಿ ಹಾಗೂ ತಂಡದ ವ್ಯವಸ್ಥಾಪಕರಾದ ಮಾಧವ ಶೆಟ್ಟಿ ಬಾಳ ಕಾಟಿಪಳ್ಳ ಇವರನ್ನು ಅತಿಥಿ ಗಣ್ಯರ ಹಸ್ತದಿಂದ ಸನ್ಮಾನಿಸಲಾಗುವುದು.

 ಹೆಗ್ಗಡ ಸೇವಾ ಸಂಘ (ರಿ) ಮುಂಬಯಿ,  ತುಳುಕೂಟ ಐರೋಲಿ, ಶ್ರೀ ಕಟೀಲು ಯಕ್ಷ ಕಲಾರಂಗ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿ, ಅಜೆಕಾರು ಕಲಾಭಿಮಾನಿ ಬಳಗದ ಸರ್ವ ಸದಸ್ಯರ ಸಹಕಾರದೊಂದಿಗೆ ನಡೆಯಲಿರುವ ಈ ತಂಡದ ಮುಂಬೈ ಪ್ರವಾಸದ ಕೊನೆಯ ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಪ್ರಿಯರು ಬಂದು ಸಹಕರಿಸಬೇಕಾಗಿ ತಂಡದ ಮುಂಬೈ ಸಂಚಾಲಕರಾದ ಯಕ್ಷಗುರು ಬಾಲಕೃಷ್ಣ ಶೆಟ್ಟಿ ಅಜೆಕಾರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.