ಉಡುಪಿ: ಒಂದೇ ಸೂರಿನಡಿ ವಿವಿಧ ಸೌಲಭ್ಯ ಸಿಗುವ ಕಿಸಾನ್ ಸಮೃದ್ದಿ ಕೇಂದ್ರ ಆರಂಭ
ಹೌದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಚಾಲನೆ ನೀಡಿದಂತ 1.25 ಲಕ್ಷ ಕಿಸಾನ್ ಸಮೃದ್ಧಿ ಕೇಂದ್ರಗಳ ಮೂಲಕ ದೇಶದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬೇವು ಲೇಪಿದ ಯೂರಿಯಾಗಿಂತ ಹೆಚ್ಚು ಮಿತವ್ಯಕರವಾದ ಹಾಗೂ ಶಕ್ತಿಶಾಲಿಯಾದ ಸಲ್ಫೆರ್ ಲೇಪಿತ ಯೂರಿಯಾ ಗೋಲ್ಡ್ ರಸಗೊಬ್ಬ ಬಿಡುಗಡೆ ಮಾಡಿದ್ದಾರೆ.
ಏನಿದು ಕಿಸಾನ್ ಸಮೃದ್ಧಿ ಕೇಂದ್ರ?
ರೈತರಿಗೆ ಸಕಲ ಸವಲತ್ತುಗಳನ್ನು ಒದಗಿಸುವ ಏಕಗವಾಕ್ಷಿ ಕೇಂದ್ರಗಳೇ ಕಿಸಾನ್ ಸಮೃದ್ಧಿ ಕೇಂದ್ರಗಳು. ಈ ಕಿಸಾನ್ ಕೇಂದ್ರಗಳಲ್ಲಿ ರಸಗೊಬ್ಬರ, ಬೀಜ ಸಹಿತ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಅನೇಕ ಸಲಕರಣೆಗಳು ಲಭ್ಯವಾಗಲಿದೆ.
ಇದಲ್ಲದೇ ಕೃಷಿಗೆ ಸಂಬಂಧಿಸಿದಂತ ಸವಲತ್ತುಗಳು ಇಲ್ಲಿ ದೊರೆಯಲಿದೆ. ಅಲ್ಲದೇ ಸರ್ಕಾರದ ವಿವಿಧ ಕೃಷಿ ಸಂಬಂಧಿ ಯೋಜನೆಗಳಿಗೆ ಇಲ್ಲಿಯೇ ಅರ್ಜಿ ಕೂಡ ಸಲ್ಲಿಸಬಹುದಾಗಿದೆ.

Post a Comment