ಪೋಷಕರೇ ಎಚ್ಚರ - ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ನೋಡಿ
ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಕಾದಿದೆ ಅಪಾಯ
ಸ್ಮಾರ್ಟ್‌ಫೋನ್ ಮಕ್ಕಳ ಮೇಲೆ ಬೀಳುತ್ತಿರುವ ಪರಿಣಾಮ ಅಷ್ಟಿಟ್ಟಲ್ಲ, ಹುಟ್ಟಿ ಕೆಲವು ತಿಂಗಳಾದ ಮಗುವಿಗೆ ಮೊಬೈಲ್ ತೋರಿಸಿದರೆ ಇಷ್ಟವಾಗುತ್ತದೆ, ಕೆಲವು ಮಕ್ಕಳಿಗೆ ವರ್ಷವೂ ತುಂಬಿರುವುದಿಲ್ಲ, ಮೊಬೈಲ್‌ನಲ್ಲಿ ಯೂ ಟ್ಯೂಬ್ ಐಕಾನ್ ಯಾವುದು ಎಂಬುವುದು ಕೂಡ ಗೊತ್ತಿರುತ್ತದೆ, ಬೇರೆ ಎಲ್ಲಾ ಆಟಿಕೆಗಳಿಗಿಂತ ಮಕ್ಕಳಿಗೆ ಮೊಬೈಲ್ ಅಂದರೆ ಅದೇನೋ ಸೆಳೆತ.
ಕೆಲ ಪೋಷಕರು ಮಕ್ಕಲು ತುಂಬಾ ರಚ್ಚೆ ಹಿಡಿಯುವಾಗ ಒಂದು ಕಡೆ ಸುಮ್ಮನೆ ಕೂರಲಿ ಎಂದು ಮೊಬೈಲ್‌ನಲ್ಲಿ ಮಕ್ಕಳ ಕತೆ, ಗೇಮ್ ಹಾಕಿ ಕೊಟ್ಟು ಬಿಡುತ್ತಾರೆ, ಮಗು ಗಂಟೆ-ಗಟ್ಟಲೆ ಮೊಬೈಲ್‌ನಲ್ಲಿ ಕಳೆಯುತ್ತದೆ. ಹೀಗೆ ಮಾಡುವುದರಿಂದ ಮಕ್ಕಳ ನಡುವಳಿಕೆ ಮೇಲೆ ಎಂಥ ಅಪಾಯಕಾರಿ ಪರಿಣಾಮ ಬೀಳುವುದೆಂಬುವುದು ನಿಮಗೆ ಗೊತ್ತೇ?
Healthy Active Living and Obesity Research Group ಅಧ್ಯಯನ ನಡೆಸಿ ಮಕ್ಕಳ ನಡುವಳಿಕೆ ಮೇಲೆ ಸ್ಕ್ರೀನ್‌ನಿಂಗ್ ಬೀರುವ ಪರಿಣಾಮದ ಕುರಿತು ಹೇಳಿದೆ.
ಇವರ ಸಮೀಕ್ಷೆಯಲ್ಲಿ 4, 524 ಮಕ್ಕಳ ಬಗ್ಗೆ ಕೂಲಂಕಷವಾಗಿ ಗಮನಿಸಿ ನಂತರ ವರದಿ ನೀಡಿದೆ. ತುಂಬಾ ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳು ತುಂಬಾ ನಕರಾತ್ಮಕವಾದ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.
ಮಕ್ಕಳು ಅತಿಯಾಗಿ ಮೊಬೈಲ್ ನಲ್ಲಿ ಮಗ್ನರಾಗಿದ್ದರೆ, ಅತಿಯಾದ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದರೆ ಪೋಷಕರು ಎಚ್ಚರ ವಹಿಸಲೇಬೇಕು. ಇಲ್ಲೋರ್ವ ಬಾಲಕ ವಿಡಿಯೋದಲ್ಲಿರುವಂತೆ ಅನುಕರಣೆ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಯೂಟ್ಯೂಬ್ ವಿಡಿಯೋ ನೋಡುತ್ತಿದ್ದ 11 ವರ್ಷದ ಬಾಲಕ ಅದಲ್ಲಿರುವಂತೆ ಅನುಕರಣೆ ಮಾಡಲು ಹೋಗಿ ಸಾವಿಗೆ ಶರಣಾಗಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾದಲ್ಲಿ ನಡೆದಿದೆ.
6ನೇ ತರಗತಿ ವಿದ್ಯಾರ್ಥಿ ಉದಯ್ ಮೃತ ಬಾಲಕ.
ಉದಯ್ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಯೂಟ್ಯೂಬ್ ನಲ್ಲಿ ಕಾಮಿಡಿ ವಿಡಿಯೋಗಳನ್ನು ನೋಡುತ್ತಿದ್ದ. ಹೀಗೆ ವಿಡಿಯೋಗಳನ್ನು ನೋಡುತ್ತಾ ಅನುಕರಣೆಯನ್ನು ಮಾಡುತ್ತಿದ್ದ. ಎಂದಿನಂತೆ ರಾತ್ರಿ ಊಟ ಮುಗಿಸಿ ಮೊಬೈಲ್ ನೋಡುತ್ತಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ ಬಾಲಕ ಎಷ್ಟು ಹೊತ್ತಾದರೂ ಬಾಗಿಲು ತೆಗೆದಿಲ್ಲ. ಕರೆದರೂ ಆ ಕಡೆಯಿಂದ ಯಾವುದೇ ಸುಳಿವಿಲ್ಲ. ಗಾಬರಿಯಾದ ಪೋಷಕರು ಬಾಗಿಲು ಒಡೆದು ನೋಡಿದಾಗ ಬಾಲಕ ಸಾವನ್ನಪ್ಪಿದ್ದ.
ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ನೇತಾಡುತ್ತಿರುವುದು ಕಂಡು ಬಂದಿದೆ.

Post a Comment