".

Header Ads

ಬೆಲೆ ಏರಿಕೆ ಮಧ್ಯೆ ಹೋಟೆಲ್‌ ತಿಂಡಿ ತಿನಿಸು ಬೆಲೆ ಮತ್ತಷ್ಟು ದುಬಾರಿ..!

 

 

ಹೋಟೆಲ್ಗಳು ಮತ್ತು ರೆಸ್ಟೋರೆಂಟ್ ಗಳ ಮಾಲೀಕರು ಆಹಾರ ತಿನಿಸುಗಳ ಬೆಲೆಯಲ್ಲಿ ಶೇ.15-25ರಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ಬೇಳೆಕಾಳುಗಳು, ತರಕಾರಿಗಳು, ಸಾಂಬಾರು ಪದಾರ್ಥಗಳು ಮತ್ತು ಇತರ ಸರಕುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿಯೂ ಏರಿಕೆ ಮಾಡಲು ಚಿಂತನೆ ನಡೆಸಲು ಮುಂದಾಗಿದ್ದಾರೆ. ಬೇಳೆಕಾಳು, ತರಕಾರಿ ಬೆಲೆ ಏರಿಕೆ ಮಾತ್ರವಲ್ಲ, ಹಾಲಿನ ದರ 5 ರೂಗಳಷ್ಟು ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿರುವುದು ಹಾಗೂ ವಿದ್ಯುತ್, ನೀರಿನ ದರಗಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರನ್ನು ತಮ್ಮ ದರ ಪಟ್ಟಿಯನ್ನು ಮರುಪರಿಶೀಲಿಸಲು ಮುಂದಾಗಿದ್ದಾರೆನ್ನಲಾಗಿದೆ. ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ತರಾಟೆ; ಆರ್ಥಿಕತೆ ಹದಗೆಡಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ ಆಹಾರ ಧಾನ್ಯಗಳು, ಪದಾರ್ಥಗಳು, ತರಕಾರಿಗಳ ಸೇರಿದಂತೆ ಇನ್ನಿತರೆ ಬೆಲೆಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹಲವು ಹೋಟೆಲ್ ಮಾಲೀಕರು ಈಗಾಗಲೇ ಹಲವೆಡೆ ತಿಂಡಿ, ತಿನಿಸುಗಳ ಬೆಲೆಯಲ್ಲಿ ಶೇ.5-10ರಷ್ಟು ಏರಿಕೆ ಮಾಡಿದ್ದಾರೆಂದು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಅವರು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಬೇಳೆ, ಜೀರಿಗೆ, ಮೆಣಸು ಮತ್ತು ಕೆಂಪು ಮೆಣಸಿನ ಕಾಯಿಯಂತಹ ಪ್ರಮುಖ ಪದಾರ್ಥಗಳ ಬೆಲೆಗಳು ಭಾರಿ ಏರಿಕೆ ಕಂಡಿವೆ.
Powered by Blogger.