ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದೆ 'ಚಡ್ಡಿ ಗ್ಯಾಂಗ್'!
ಚಡ್ಡಿ ಗ್ಯಾಂಗ್ ಎಂದೇ ಹೇಳಲಾಗ್ತಿರುವ ಕಳ್ಳರ ಗ್ಯಾಂಗ್ ಬೆಂಗಳೂರು ಹೊರವಲಯದ ಸರ್ಜಾಪುರ ರಸ್ತೆ ಸುತ್ತಮುತ್ತ ಮತ್ತೆ ತನ್ನ ಹಾವಳಿ ಶುರು ಮಾಡಿದ್ದು, ಕೈಯಲ್ಲಿ ಆಯುಧಗಳನ್ನ ಹಿಡಿದು ಕಳ್ಳತನಕ್ಕಿಳಿದಿದೆ. ಐವರು ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಸಜ್ಜಿತ ವಿಲ್ಲಾ, ಬೃಹತ್ ಮನೆಗಳ ಸುತ್ತಮುತ್ತವೇ ಕೈಯಲ್ಲಿ ಆಯುಧ ಹಿಡಿದು ಮುಖ ಮುಚ್ಚಿಕೊಂಡು ರಾತ್ರಿ ವೇಳೆ ತಿರುಗಾಡುತ್ತಿರುವ ಕಿರಾತಕರ ಚಲನವಲನ ಭಯ ಹುಟ್ಟಿಸುವಂತಿದೆ.ಪೊಲೀಸರು ಚಾಪೆ ಕೆಳಗಡೆ ನುಗ್ಗಿದ್ರೆ ಅಪರಾಧಿಗಳು ರಂಗೋಲಿ ಕೆಳಗಡೆ ನುಗ್ಗುತ್ತಾರೆ. ಹೀಗಾಗಿಯೇ ಕಿರಾತಕರು ಒಂಚೂರು ಭಯವಿಲ್ಲದೆ ಮತ್ತೆ ಮತ್ತೆ ಇಂತಹ ನಾಲಾಯಕ್ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ .ಕಳೆದ ಮೂರ್ನಾಲ್ಕು ದಿನಗಳಿಂದ ವಿಲ್ಲಾ, ಅಪಾರ್ಟ್‌ಮೆಂಟ್‌ಗಳ ಬಳಿ ಕಳ್ಳತನಕ್ಕೆ ಯತ್ನ ಮಾಡಿದ್ದಾರೆ. ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದ ಅಸಾಮಿಗಳು ಕೈಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಓಡಾಟ ನಡೆಸಿದ್ದು, ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನಕ್ಕೆ ಕನ್ನ ಹಾಕಿದ್ದಾರೆ.
ಸಿಸಿಟಿವಿಗಳನ್ನ ನೋಡಿ ರಾತ್ರಿ ವೇಳೆ ಅಲರ್ಟ್ ಆದ ನಿವಾಸಿಗಳು ಈ ಬಗ್ಗೆ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದು, ಈ ಹಿಂದೆಯೂ ಕೆಲವು ಬಾರಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಈಗ ಮತ್ತೆ ತಲೆ ಎತ್ತಿರುವುದಕ್ಕೆ ಜನರು ಭೀತಿಗೊಂಡಿದ್ದಾರೆ.

Post a Comment