ಅಗಸ್ಟ್ 13 ರಂದು ಚಿಣ್ಣರ ಬಿಂಬ ಮುಂಬಯಿ ಇದರ ಶಿಬಿರಗಳಲ್ಲಿ ಒಂದಾದ ಮೀರಾ ರೋಡ್, ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೆ
ಮುಂಬೈ : ಚಿಣ್ಣರಬಿಂಬ ಮುಂಬಯಿ ಇದರ ಶಿಬಿರಗಳಲ್ಲಿ ಒಂದಾದ ಮೀರಾ ರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆಯು ಅಗಸ್ಟ್ 13 ರಂದು ರವಿವಾರ ಮಧ್ಯಾಹ್ನ 1 ಗಂಟೆಯಿಂದ ನ್ಯೂ ಸೈಂಟ್ ಆಗ್ನೆಸ್ ಹೈ ಸ್ಕೂಲ್ ಶಕ್ತಿನಗರ ನಿಯರ್ ಎಸ್ ಎನ್ ಕಾಲೇಜ್ ಭಯಂದರ್ ದಲ್ಲಿ ನಡೆಯಲಿದೆ.
ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವನ್ನು Rai Sumati Educational Trust, ಸೈಂಟ್ ಆಗ್ನೆಸ್ ಇಂಗ್ಲೀಷ್ ಹೈಸ್ಕೂಲ್ ,K S ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜ್ ನ ಕಾರ್ಯಾಧ್ಯಕ್ಷರಾಗಿರುವ ಆಗಿರುವ Dr. ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ಸ್ ಸಂಘ ಮುಂಬೈ ಮೀರಾ ಬೈಂದರ್ ಪ್ರಾದೇಶಿಕ ಸಮಿತಿಯ ಜೊತೆ ಕೋಶಾಧಿಕಾರಿಯಾಗಿರುವ ಶ್ರೀಯುತ ರಮೇಶ ಎಂ ಶೆಟ್ಟಿ ಸಿದ್ಧಕಟ್ಟೆಯವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೀರಾ ರೋಡ್ ಶುಭಂ ಹೋಟೆಲ್ ನ ಮಾಲಕರಾಗಿರುವ ಶ್ರೀಯುತ ಉದಯ್ ಎಮ್ ಶೆಟ್ಟಿ ಮಲರಬೀಡು, ಸಾಯಿ ಬಾಲಾಜಿ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿರುವ ಶ್ರೀಯುತ ಯೋಗೇಂದ್ರ ಎಸ್ ಗಾಣಿಗ ಹಾಗೂ ನಿತ್ಯಾನಂದ ಸೇವಾ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆರಾಗಿರುವ ಶ್ರೀಮತಿ ಜಯಶ್ರೀ ಬಾಲಕೃಷ್ಣ ಶೆಟ್ಟಿ ಅವರು ಆಗಮಿಸಲಿದ್ದಾರೆ.
ಶಿಬಿರ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಭಾವಗೀತೆ , ಜಾನಪದ ಗೀತೆ , ಚರ್ಚಾ ಸ್ಪರ್ಧೆ, ಏಕಪಾತ್ರಾಭಿನಯ, ಛದ್ಮವೇಷ ಸ್ಪರ್ಧೆ, ಪಾಲಕರ ದೇಶಭಕ್ತಿ ಗೀತೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಲಿದೆ.
ಚಿಣ್ಣರ ಬಿಂಬ ಸಾವಿರಾರು ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆ ,ಕೌಶಲ್ಯವನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟಿರುವುದು ಈ ಸಂಸ್ಥೆಯ ಧನಾತ್ಮಕ ಸಾಧನೆ. ಚಿಣ್ಣರಬಿಂಬದ ಶಿಬಿರಗಳಲ್ಲೊಂದಾದ ಮೀರಾ ರೋಡ್ ಶಿಬಿರದ ಚಿಣ್ಣರಿಗೆ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಭಾಗವಹಿಸಿ ಚಿಣ್ಣರನ್ನು ಪ್ರೋತ್ಸಾಹಿಸುವಂತೆ ಚಿಣ್ಣರ ಬಿಂಬದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

Post a Comment