".

Header Ads

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), 15ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ. ಸಾಧಕರಿಗೆ ಸನ್ಮಾನ.

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), 15ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ. ಸಾಧಕರಿಗೆ ಸನ್ಮಾನ.

ಸಂಸ್ಥೆಯು ಸಾರ್ಥಕ ಸೇವೆಯಿಂದ ಎಲ್ಲೆಡೆ ಗುರುತಿಸಲ್ಪಟ್ಟಿದೆ - ಹರೀಶ್‌ ಡಿ. ಮೂಲ್ಯ 

ಮುಂಬಯಿ : ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಕಳೆದ 15 ವರ್ಷಗಳಿಂದ ವಿವಿಧ ರೀತಿಯಲ್ಲಿ ಧಾರ್ಮಿಕ ಸೇವೆ ಮಾತ್ರವಲ್ಲ ಜನ ಸಾಮಾನ್ಯರ ಸೇವೆ ಮಾಡುತ್ತಿದ್ದು ತನ್ನ ಸೇವೆಯಿಂದ ಮುಂಬಯಿಯಲ್ಲಿ ಮಾತ್ರವಲ್ಲ ತವರೂರಲ್ಲೂ ಗುರುತಿಸಲ್ಪಟ್ಟಿದೆ. ದಾನಿಗಳ ಹಾಗೂ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಇದು ಸಾಧ್ಯ ಎಂದು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇದರ ಅಧ್ಯಕ್ಷರಾದ ಹರೀಶ್‌ ಡಿ. ಮೂಲ್ಯ ತಿಳಿಸಿದರು.  
ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇದರ 15ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ವಿವಿಧ ಧಾರ್ಮಿಕ ಗಳೊಂದಿಗೆ ಜೋಗೇಶ್ವರಿ (ಪೂರ್ವ) ದ , ಮಾಂಗಲ್ಯ ಮಂಗಳ ಕಾರ್ಯಾಲಯದ ಸಭಾಗೃಹದಲ್ಲಿ ಆ 15 ಜರಗಿದ್ದು ಸಮಾರಂಭದ  ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮದು ಸಣ್ಣ ಮಟ್ಟದ ಸಂಘಟನೆಯಾಗಿದ್ದರೂ ಉನ್ನತ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಮುಂಬಯಿ ಮಾತ್ರವಲ್ಲದೆ ತವರೂರಲ್ಲೂ ಸೇವೆ ಸಲ್ಲಿಸಿದೆ. ಕುಲಾಲ ಸಮಾಜಕ್ಕೆ ನಮ್ಮ ಸಂಸ್ಥೆ ಸಾಧ್ಯವಾದ ಸಹಾಯ ನೀಡಿದೆ. ನಮ್ಮ ಕಾರ್ಯಕರ್ತರ ಹಾಗೂ ದಾನಿಗಳ ಸೇವೆಯನ್ನು ನಾವು ಎಂದು ಮರೆಯುವಂತಿಲ್ಲ ಎಂದು ಸನ್ಮಾನಿತರನ್ನು ಅಭಿನಂದಿಸಿದರು.
 
ಈ ಸಂದರ್ಭದಲ್ಲಿ ಆಶೀರ್ವಚನದ ಮಾತುಗಳನ್ನಾಡಿದ ಪುರೋಹಿತರಾದ  ಸೂರ್ಯನಾರಾಯಣ ಭಟ್ ಗೋರಾಯಿ  ಅವರು ಮನುಷ್ಯ ತಿಳಿಯದೇ ಮಾಡಿದ ತಪ್ಪಿಗೆ ಪ್ರಾಯಶ್ಚಿತಕ್ಕಾಗಿ ದೇವರಲ್ಲಿ ಬೇಡ ಬೇಕಾಗಿದೆ. ಸಮಾಜ ಮುಖಿ ಕಾರ್ಯಾಗಳಿಂದ ದೇವರ ಅನುಗ್ರಹ ಪಡೆಯಬಹುದು. ಶ್ರದ್ದಾ ಭಕ್ತಿಯಿಂದ ಮಾಡುವ ಸೇವೆ ಅದು ದೇವರ ಸೇವೆಯಾಗುತ್ತದೆ. ಎಲ್ಲರೂ ಸೇರಿ ದೇವರಲ್ಲಿ ಪ್ರಾರ್ಥಿಸಿದಲ್ಲಿ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ದೇವರ ಅನುಗ್ರಹದಿಂದ ಸಂಘ ಸಂಸ್ಥೆಗಳನ್ನು ಕಟ್ಟಿ ಮುಂದೆ ದೇವರು ನಮ್ಮನ್ನು ರಕ್ಷಿಸುತ್ತಾರೆ. ಜೀವನದಲ್ಲಿ ಉತ್ತಮ ಕೆಲಸಮಾಡಿದಲ್ಲಿ ಅದನ್ನು ನಂತರವೂ ಜನರು ನೆನಪಲ್ಲಿಡುತ್ತಾರೆ.  ಎಲ್ಲರಿಗೂ ಮಾತೆ ಮಹಾಲಕ್ಷಿಯು ಅನುಗ್ರಯಿಸಲಿ ಎಂದರು.

ಮುಂಬಯಿ ಕುಲಾಲ ಸಂಘದ ಕುಲಾಲ ಭವನ ಕಟ್ಟಡ ಸಮಿತಿಯ ಉಪಕಾರ್ಯಾಧ್ಯಕ್ಷ  ಸುನಿಲ್ ಸಾಲ್ಯಾನ್, ಅವರು ಮಾತನಾಡುತ್ತಾ ನಾನಿಲ್ತಾರ್ ಅಭಿಮಾನಿ ಬಳಗ ದ ಕಾರ್ಯಕ್ರಮದಿಂದ ನಾನು ಸಂತುಷ್ಟನಾಗಿದ್ದೇನೆ. ಊರಲ್ಲಿ ಹೆಸರಿನಲ್ಲಿ ಮುಂಬಯಿ ಯಲ್ಲಿರುವ  ಸಮಾಜ ಬಾಂಧವರನ್ನು ಸೇರಿಸಿ ಹಿಂದುತ್ವವನ್ನು ಉಳಿಸುವ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವುದು ನಿಜಕ್ಕೂ ಅಭಿನಂದನೀಯ. ಇಂತಹ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೋಟೆಲ್ ಉದ್ಯಮಿ, ಪದ್ಮನಾಭ ಬಂಗೇರ ಅವರು ಮಾತನಾಡುತ್ತಾ ಸುಮಾರು ಐವತ್ತು ವರ್ಷಗಳ ಹಿಂದೆ ಮನೆ ಮನೆಗಳಲ್ಲಿ, ಶಾಲೆಗಳಲ್ಲಿ ಭಜನೆ ಮಾಡುತ್ತಿದ್ದರು. ಇದೀಗ ಸಂಘ ಸಂಸ್ತೆಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾವು ಭಜನೆಯನ್ನು ಕೇಳುತ್ತೇವೆ. ಮನೆಯಲ್ಲಿರುವ ಹಿರಿಯರನ್ನು ವೃದ್ದಾಶ್ರಮಮಕ್ಕೆ ಕಳುಹಿಸಿದಲ್ಲಿ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ತಿಳುಯುವುದು ಅಸಾಧ್ಯ. ನಮ್ಮ ಧರ್ಮವನ್ನು ನಮ್ಮ ಮನೆಯಿಂದಲೇ ಉಳಿಸೋಣ ಎಂದರು.

ಮುಖ್ಯ ಅತಿಥಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಮಲಾಡ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಮಾತನಾಡುತ್ತಾ ನಂಬಿಕೆ ಹಾಗೂ ಭಕ್ತಿಯಿಂದ ದೇವರ ಕೆಲಸ ಮಾಡಿದಲ್ಲಿ ದೇವರು ನಮ್ಮೊಂದಿಗಿರುತ್ತಾರಂತೆ, ನಮ್ಮ ಕೆಲಸ ಕಾರ್ಯಗಳಿಗೆ ಗೆಲುವು ಕೊಡುತ್ತಾರಂತೆ. ಪೂಜೆಯನ್ನು ನೋಡಿದರವರಿಗೂ ಪೂಜೆಯಲ್ಲಿ ಪಾಲ್ಗೊಂಡವರ ಇಷ್ಟಾರ್ಥವನ್ನು ಶ್ರೀ ವರಮಹಾಲಕ್ಷ್ಮೀ ಈಡೇರಿಸಲಿ. ಇಂದು ಸನ್ಮಾನಿತರ ಮುಂದಿನ ಬದುಕು ಇನ್ನೂಉನ್ನತಮಟ್ಟಕ್ಕೇರಲಿ, ಅವರಿಗೆ ಕುಲಾಲ ಸಮಾಜದ ಸೇವೆ ಮಾಡುವ ಹೆಚ್ಚಿನ ಶಕ್ತಿ ಕರುಣಿಸಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ತುಳು ಕೂಟ ಫೌಂಡೇಶನ್ ನಾಲಾಸೋಪಾರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಸತೀಶ್‌ ಶೆಟ್ಟಿ,  ಹೋಟೆಲ್ ಗೋಕುಲ್‌ ಧಾಮ್‌, ಗ್ರಾಂಟ್ ರೋಡ್ ನ  ಪ್ರಸಾದ್‌ ಪೂಜಾರಿ, ಕುಲಾಲ ಸಂಘ ಮುಂಯಿಯ ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು 
ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ  ನಾನಿಲ್ತಾರು ಅಭಿಮಾನಿ ಬಳಗ ಮುಂಬಯಿ ಹಿರಿಯ ಸದಸ್ಯರಾದ ವಿಶ್ವನಾಥ್ ಕುಂದರ್ ಅಂದೇರಿ ದಂಪತಿ ಮತ್ತು  ಕುಲಾಲ ಸಂಘ, ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ, ಸಂಘಟಕಿ ಮಾಲತಿ ಜಯ ಅಂಚನ್  ದಂಪತಿಯನ್ನು ಸನ್ಮಾನಿಸಲಾಯಿತು. 
ಕೋಶಾಧಿಕಾರಿ ರೋಹಿದಾಸ್‌ ಕೆ, ಬಂಜನ್ ಮತ್ತು ಸರೋಜಿನಿ ಅವರು ಸನ್ಮಾನಿತಿರನ್ನು ಪರಿಚಯಿಸಿದರು.

ಶ್ರೀ ಸಂತೋಷ್ ಭಟ್,ಚಾರ್‌ಕೋಪ್, ಕಾಂದಿವಲಿ ಅವರ ಪೌರೋಹಿತ್ಯದಲ್ಲಿ , ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ನಡೆಯಿತು.  ಪೂಜಾವಿಧಿಯಲ್ಲಿ ಗಂಗಯ್ಯ ಮೂಲ್ಯ ದಂಪತಿ ಮತ್ತು ನವ್ಯ ಸಂದೀಪ್ ದಂಪತಿ ಬಾಗವಹಿಸಿದರು. 

ಸಭಾಕಾರ್ಯಕ್ರಮಕ್ಕೆ ಮೊದಲು ಕುಲಾಲ ಸಂಘ ಮುಂಬೈ ಗುರುವಂದನಾ ಭಜನಾ ಮಂಡಳಿ ಮೀರಾರೋಡ್ ನಲಾಸೋಪಾರ ತಂಡದಿಂದ ಭಜನೆ, ಪರಿಸರದ ವಿವಿಧ ಪ್ರತಿಭೆಗಳಿಂದ ಸಂಗೀತ ನೃತ್ಯ ನಡೆಯಿತು.
ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ, ಬಳಿಕ ಮಹಾಮಂಗಳಾರತಿ ನಡೆದಿದ್ದು ಸುಮಂಗಲೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ  ಮುಲ್ಲಡ್ಕ ಮಡಿಕೆ  ಮನೆ ದಿ.ಶೀನ ಮೂಲ್ಯರ  ಸವಿನೆನಪಿಗಾಗಿ ಅವರ ಪುತ್ರರಾದ  ಕೃಷ್ಣ ಎಸ್. ಮಾಲ್ಯ, ನಾಲಾಪಾರ ಪ್ರಾಯೋಜತ್ವದಲ್ಲಿ  ಅನ್ನ ಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಜ್ಯೋತಿ ಕ್ರೇಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್, ನಿರ್ದೇಶಕ ನ್ಯಾ. ಉಮಾನಾಥ್ ಮೂಲ್ಯ,  ಕಾರ್ಯದರ್ಶಿ . ಶೇಖರ್ ಮೂಲ್ಯ,
ಸಮಾಜ ಸೇವಕ ವಾಮನ್ ಮೂಲ್ಯ ಅಧ್ಯಪಾಡಿ, ಪತ್ರಕರ್ತ ಬಿ .ದಿನೇಶ್ . ಕುಲಾಲ್, ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲಿಯಾನ್, ಕೋಶಾಧಿಕಾರಿ ಜಯ ಅಂಚನ್, ಅಮೂಲ್ಯ ಸಂಪಾದಕ ಶಂಕರ್ ವೈ ಮೂಲ್ಯ,  ಲಕ್ಷ್ಮಣ್ ಸಿ ಮೂಲ್ಯ, ರಮೇಶ್ ಬಂಗೇರ, ಸತೀಶ್ ಬಂಗೇರ, ಕುಲಾಲ ಸಂಘದ ಎಲ್ಲಾ ಸ್ಥಳೀಯ ಸಮಿತಿಯ ಮತ್ತು ಉಪಸಮಿತಿಗಳ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕುಲಾಲ ಸಂಘ ಮುಂಬಯಿಯ ಮತ್ತು ಉಪಸಮಿತಿಗಳ ಪದಾಧಿಕಾರಿಗಳು, ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ವಿವಿಧ ಜಾತೀಯ ಸಂಘಟನೆಗಳ ಗಣ್ಯರನ್ನು ಗೌರವಿಸಲಾಯಿತು.

ನಾನಿಲ್ತಾರ್ ಅಭಿಮಾನಿ ಬಳಗ ದ  ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪಾರ, ಉಪಾಧ್ಯಕ್ಷ ದಿನೇಶ್‌ ಮೂಲ್ಯ, ಅಂಧೇರಿ, ಕಾರ್ಯದರ್ಶಿ ದಿನೇಶ್‌ ಬಂಗೇರ, ಖಾರ್‌ದಾಂಡ ,ಕೋಶಾಧಿಕಾರಿ ರೋಹಿದಾಸ್‌ ಕೆ, ಬಂಜನ್, ನಾಲಾಸೋಪಾರ, ಜೊತೆ ಕಾರ್ಯದರ್ಶಿ ಲೋಕೇಶ್ ಮೂಲ್ಯ, ಗೊರೆಗಾಂವ್,  ಜೊತೆ ಕೋಶಾಧಿಕಾರಿ ವಿಶ್ವನಾಥ ಕುಂದರ್‌, ಅಂಧೇರಿ, ಸಲಹಾರರಾದ ಹರೀಶ್‌ ಕುಲಾಲ್, ಮೀರಾ ರೋಡ್, ನಾರಾಯಣ ಅರ್ಕ್ಯಾನ್, ಅಂಧೇರಿ. ವಿಠಲ್‌ ಮೂಲ್ಯ, ಅಂಧೇರಿ,  ಕೇಶವ್ ಬಂಜನ್, ಜೋಗೇಶ್ವರಿ, ಸುರೇಶ್‌ ವಸಂತ ಬಂಗೇರ, ಶೇರ್ ಪಂಜಾಬ್, ಸದಾಶಿವ ಮೂಲ್ಯ, ವಿರಾ‌ರ್, ನಿತಿನ್‌ ಸಿ. ಬಂಜನ್, ವಿರಾರ್, ಸುನಿತಾ ಎಸ್‌. ಮೂಲ್ಯ, ವಿರಾರ್, ಬೇಬಿ ಮೂಲ್ಯ ಜೋಗೇಶ್ವರಿ, ಉಮಾವತಿ ಬಂಗೇರ, ಖಾ‌ರ ,ದಿವ್ಯಾ ಮೂಲ್ಯ, ಗೋರೆಗಾಂವ್,
ಸರೋಜಾ ಮೂಲ್ಯ, ಅಂಧೇರಿ, ವಿಜಯಲಕ್ಷ್ಮಿ, ನಾಲಾಸೋಪಾರ,  ಖಾ‌‌ರ,ಸೌಮ್ಯ ಬಂಗೇರ, ಖಾ‌ರ್,  ,ರೇವತಿ ಮೂಲ್ಯ, ಅಂಧೇರಿ, ,, ಶಂಕರ್‌ ಮೂಲ್ಯ, ವಸಾಯಿ,ನಳಿನಿ ಎನ್. ಬಂಜನ್, ವಿರಾ‌ರ, ಸುಂದ‌ರ ಶ್ರೀಯಾನ್, ಖಾ‌ರ,ಅರ್ಚನಾ ಎಸ್. ಮೂಲ್ಯ, ವಸಾಯಿ ,ಸುಕುಮಾರ್ ಎಸ್‌. ಸಾಲ್ಯಾನ್,  ಪ್ರಕಾಶ್‌ ಮೂಲ್ಯ, ಸಾಕಿನಾಕ, ನಾಗಪ್ಪ ಸಿ. ಮೂಲ್ಯ, ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದುರು,
ಬಳಗದ ಸಂಚಾಲಕ ಕೃಷ್ಣ ಮೂಲ್ಯ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದ್ದು ಕವಿತಾ ಸಾಲ್ಯಾನ್, ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.


--------&
ಸನ್ಮಾನಿತರ ನುಡಿ,
----
-ಮುಂಬಯಿಯ ಕುಲಾಲ ಸಂಘದಿಂದಾಗಿ  ಸಮಾಜದಲ್ಲಿ   ಗುರುತಿಸಿಕೊಂಡಿರುವೆ:ಮಾಲತಿ ಜಯ ಅಂಚನ್,
ಸನ್ಮಾನವನ್ನು ಸ್ವೀಕರಿಸಿದ ಕುಲಾಲ ಸಂಘ, ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ, ಸಂಘಟಕಿ  ಮಾಲತಿ ಜಯ ಅಂಚನ್ ಸನ್ಮಾನಕ್ಕೆ ಉತ್ತರಿಸುತ್ತ
ದೇವರ ಪೂಜೆಯ ಸಂದರ್ಭದಲ್ಲಿ ಸನ್ಮಾನ ಮಾಡಿದ್ದು ನಿಜಕ್ಕೂ ನನ್ನ ಸೌಭಾಗ್ಯ. ಮುಂಬಯಿಯ ಕುಲಾಲ ಸಂಘದಿಂದಾಗಿ ನಾನು ಇಂದು ಹೆಚ್ಚಿನವರಿಗೆ ಪರಿಚಿತಳಾಗಿರುವೆನು. ನನಗೆ ಕೆಲವು ಗಣ್ಯರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಾಯಿತು. ನಾವು ಇನ್ನೊಬ್ಬರಿಗೆ ಸಹಕರಿಸಿದಲ್ಲಿ ಅವರೆಲ್ಲರ ಆಶ್ರೀರ್ವಾದದಿಂದ ದೇವರು ನಮಗೆ ಯಾವುದಾದರೂ ರೀತಿಯಲ್ಲಿ ಸಹಕರಿಸುತ್ತಾರೆ. ಎಲ್ಲರ ಅಶೀರ್ವಾದಿಂದ ನನ್ನ ಮಗಳು ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿದ್ದಾಳೆ. ಗುರುಹಿರಿಯರ ಹಾಗೂ ದೇವರ ಅಶೀರ್ವಾದಿಂದ ಇಂದು ಧಾರ್ಮಿಕ ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ದೊರಕಿದೆ. ಅಧಿಕಾರದ ಆಸೆಯಿಂದ ಸೇವೆ ಮಾಡಿಲ್ಲ  ಆತ್ಮ ತೃಪ್ತಿಯ ಗಾಗಿ   ಸೇವೆ ಮಾಡಿದ್ದೇನೆ ಎಂದರು

-------++++++++++++
ಪೂಜೆಯ ಮೂಲಕ  ಸನಾತನ ಹಿಂದೂ ಧರ್ಮ ಬಲಿಷ್ಠ ಕೊಳ್ಳಲು ಸಾಧ್ಯ : ರಘು ಎ. ಮೂಲ್ಯ,

ಮುಖ್ಯ ಅತಿಥಿ ಕುಲಾಲ ಸಂಘ, ಮುಂಬಯಿ ಅಧ್ಯಕ್ಷ  ರಘು ಎ. ಮೂಲ್ಯ ಮಾತನಾಡಿ ನನ್ನನ್ನು ಇಂದು ಗೌರವಿಸಲಾಗಿದ್ದು ಇದು ಕುಲಾಲ ಸಮುದಾಯಕ್ಕೆ ನೀಡಿದ ಗೌರವವಾಗಿದೆ. ಕುಲಾಲ ಮಹಾ ಮಹಾದಾನಿಯಾಗಿ ಬೆಳೆದಿರುವ ಸುನಿಲ್ ಸಾಲ್ಯಾನ್ ರಿಂದ  ಸಮಾಜದ ಅನೇಕ ಅಸಹಾಯಕರಿಗೆ ಪ್ರಯೋಜನಕಾರಿಯಾಗುತ್ತಿದ್ದು . ಕುಲಾಲ ಸಮಾಜದ ಯುವ ಜನಾಂಗ ಉತ್ಸವದಿಂದ ಈ ಪೂಜೆಯಲ್ಲಿ ಸಕ್ರಿಯ ರಾಗಿದ್ದಾರೆ . ಪೂಜೆಯ ಮೂಲಕ  ಸನಾತನ ಹಿಂದೂ ಧರ್ಮ ಬಲಿಷ್ಠ ಕೊಳ್ಳಲು ಸಾಧ್ಯ ಕುಲಾಲ ಸಂಘದ ಮುಖವಾಣಿ ಅಮೂಲ್ಯ ಪತ್ರಿಕೆಯ ೨೫ ನೇ ವರ್ಷದ ಸಂಭ್ರಮವನ್ನು ನವೆಂಬರ ೫ ರಂದು ನಡೆಸಲಿದ್ದು ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ವಿನಂತಿಸಿದರು.
Powered by Blogger.