".

Header Ads

ಮಿಸ್ ದಿವಾ ಯೂನಿವರ್ಸ್ 2023 ಕರ್ನಾಟಕದ ತ್ರಿಶಾ ಶೆಟ್ಟಿ ಮೊದಲ ರನ್ನರ್-ಅಪ್


 ಮುಂಬಯಿಯಲ್ಲಿ ನಡೆದ ನಡೆದ ‘ಮಿಸ್ ದಿವಾ ಯೂನಿವರ್ಸ್ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ ರನ್ನರ್ ಅಪ್’ ಕಿರೀಟಕ್ಕೆ ಭಾಜನರಾಗಿದ್ದಾರೆ. ಕಳೆದ ವರ್ಷ ಮಂಗಳೂರು ಮೂಲದ ಸುಂದರಿ ದಿವಿತಾ ರೈ ಅವರು  ಅವರು ‘ಮಿಸ್ ದಿವಾ ಯೂನಿವರ್ಸ್ 2022’ ಆಗಿ ಹೊರಹೊಮ್ಮಿದ್ದರು. ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಟ್ಟುಕೊಂಡಿದೆ.

‘ಮಿಸ್ ದಿವಾ ಯೂನಿವರ್ಸ್ 2023’ ಕಿರೀಟ ಚಂಡೀಗಢದ ಬೆಡಗಿ ಶ್ವೇತಾ ಶಾರದಾ   ಅವರ ಪಾಲಾಗಿದೆ. ಕಳೆದ ವರ್ಷದ ವಿಜೇತೆ ದಿವಿತಾ ರೈ ಅವರು ಈ ಕಿರೀಟವನ್ನು ಈ ಸಾಲಿನ ವಿಜೇತೆ ಶ್ವೇತಾ ಶಾರದಾ ಅವರಿಗೆ ತೊಡಿಸಿದರು. ಮಿಸ್ ದಿವಾ ಯೂನಿವರ್ಸ್ 2023 ರಲ್ಲಿ ಕರ್ನಾಟಕದಿಂದ ಬಂದ ತ್ರಿಶಾ ಶೆಟ್ಟಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತ್ರಿಶಾ ಶೆಟ್ಟಿ ಅವರ ಕುರಿತು ಹೇಳುವುದಾದರೆ, 22 ನೇ ವಯಸ್ಸಿನಲ್ಲಿ, ತ್ರಿಶಾ ಮನೋವಿಜ್ಞಾನದಲ್ಲಿ ಪದವೀಧರರಾಗಿ, ಮಾಡೆಲ್ ಮತ್ತು ನಟಿಯಾಗಿ ನಿಂತಿದ್ದಾರೆ. ಈಕೆ ನೃತ್ಯಗಾತಿ. ಭರತನಾಟ್ಯ, ಕಥಕ್ ಮತ್ತು ಬೆಲ್ಲಿ ಡ್ಯಾನ್ಸ್‌ನ ಆಕರ್ಷಕ ಲಯಗಳನ್ನು ಕರಗತ ಮಾಡಿಕೊಂಡಿದ್ದಾರೆ. ಮನೋವಿಜ್ಞಾನದ ಅಧ್ಯಯನ ಮಾಡಿರುವ ತ್ರಿಶಾ ಅವರು, ವಿಕಲಾಂಗ ಮಕ್ಕಳಿಗೆ ಸೃಜನಾತ್ಮಕ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Powered by Blogger.