ಆ.31ರಿಂದ ಸೆ. 2 ವರೆಗೆ ಜೋಗೇಶ್ವರಿಯಲ್ಲಿ ಶ್ರೀ ಗುರು ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವ
ಆ.31ರಿಂದ ಸೆ. 2 ವರೆಗೆ ಜೋಗೇಶ್ವರಿಯಲ್ಲಿ
ಶ್ರೀ ಗುರು ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವ
ಜೋಗೇಶ್ವರಿ: ಆ.28, ಶ್ರೀ ಗುರು ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವವು ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆ.31ರಿಂದ ಸೆ. 2 ವರೆಗೆ ಶ್ರೀಮಧ್ವಾಚಾರ್ಯಮೂಲ ಸಂಸ್ಥಾನದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಜೋಗೇಶ್ವರಿ
ಪಶ್ಚಿಮ ಓಶಿವಾರ ರಿಲೀಪ್ ರೋಡ್ ನ ಗುಲ್ಶನ್ ನಗರದ ಮಂತ್ರಾಲಯ ಶಾಖೆಯ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ವಿವಿಧ ಪೂರ್ವಭಾವಿ ಧಾರ್ಮಿಕ ಸೇವಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಆ. 31ರಂದು ಪೂರ್ವಾರಾಧನೆ ಸೆ. 1ರಂದು ಮಧ್ಯಾರಾಧನೆ ಸೆ. 2ರಂದು ಉತ್ತರಾರಾಧನೆ ವಿಜೃಂಭಣೆಯಿಂದ ಜರಗಲಿದೆ. ಮೂರು ದಿನಗಳಲ್ಲಿ ಜರಗಲಿರುವ ಅರಾಧನಾ ಮಹೋತ್ಸವದಲ್ಲಿ ರಾಯರ ಬೃಂದಾವನ ದಲ್ಲಿ ಬೆಳಿಗ್ಗೆ ಗಂಟೆ 5ರಿಂದ ನೈಮಲ್ಯ ವಿಸರ್ಜನೆ ವೇದ ಪಾರಾಯಣ ಫಲಪಂಚಾಮೃತ ಅಭಿಷೇಕ ಪಾದ ಪೂಜೆ, ಮಹಾ ಪೂಜೆ ಸರ್ವಸೇವಾ ಕನಕ ಮಹಾಪೂಜೆ ರಥೋತ್ಸವ ಅಲಂಕಾರ ಬ್ರಾಹ್ಮಣ ಪೂಜೆ ಹಷ್ಟೋದಕ ಬಳಿಕ ಮಧ್ಯಾಹ್ನ 12:30ಕ್ಕೆ ಮಹಾ ಮಂಗಳಾರತಿ ಜರುಗುವುದು.
ಕಲಿಯುಗದ ಕಾಮಧೇನು ಎಂದೇ ಸಹಸ್ರಾರು ಭಕ್ತರಿಂದ ಆರಾಧಿಸುವ ಶ್ರೀ ರಾಘವೇಂದ್ರ ಸ್ವಾಮಿಗಳ ಭೌತಿಕ ನೆಲೆ ಭಕ್ತರ ಸೆಳೆಯಾದ ಮಹಾನಗರದ ಪುಣ್ಯ ಕ್ಷೇತ್ರ ಅಭಿನವ ಮಂತ್ರಾಲಯದಲ್ಲಿ ಸರ್ವ ರಾಯರ ಸದ್ಭಕ್ತರು ಭಾಗವಹಿಸಿ ತೀರ್ಥ ಪ್ರಸಾದ ಮಂತ್ರಾಕ್ಷತೆ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶಾಖೆಯ ಪ್ರಬಂಧಕರಾದ ಸ್ವಾಮಿರಾಯ ಜೋಶಿ ಹಾಗೂ ಆಡಳಿತ ವರ್ಗ, ಅರ್ಚಕ ವೃಂದದವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಉಪನಗರದ ಜನಾಕರ್ಷಣೆಯ ಭಕ್ತಿಯ ಆಧ್ಯಾತ್ಮಿಕ ಕ್ಷೇತ್ರವಾಗಿ ನಿರ್ಮಾಣಗೊಂಡ ರಾಯರ ಅಭಿನವ ಮಂತ್ರಾಲಯದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ಶ್ರೀದೇವಿ ಭೂದೇವಿ ಲಿಂಗಸ್ವರೂಪಿ ಶಿವ, ಹನುಮಾನ್, ಗಣಪತಿಯನ್ನು ರಾಯರ ಮಠದಲ್ಲಿ ಆರಾಧಿಸುವುದರ ಜೊತೆಗೆ ಶ್ರೀ ಮಂಚಾಲಮ್ಮ ದೇವಿ, ನವಗ್ರಹ ಪ್ರತಿಬಿಂಬಗಳು ಆರಾಧಿಸಲ್ಪಡುತ್ತಿದೆ.
Post a Comment