ವಕೀಲರ ಕಚೇರಿಯಲ್ಲಿ ಮದುವೆ ನಡೆದರೂ ಹಿಂದೂ ವಿವಾಹ ಕಾಯ್ದೆಯಡಿ ಮನ್ನಣೆ: ಸುಪ್ರೀಂ ಕೋರ್ಟ್
ವಕೀಲರ ಕಚೇರಿಯಲ್ಲಿ ವಧೂ-ವರರರು ಮದುವೆ ಸಮಾರಂಭವನ್ನು ನಡೆಸಿದರೂ ಅದಕ್ಕೆ ಹಿಂದೂ ವಿವಾಹ ಕಾಯ್ದೆ ಯಡಿ ಮನ್ನ ಣೆ ಸಿಗುತ್ತ ದೆ ಎಂದು ಸುಪ್ರೀಂ ಕೋರ್ಟ್ ಮಹತ್ವ ದ ತೀರ್ಪು ನೀಡಿದೆ. ಗಂಡು ಮತ್ತು ಹೆಣ್ಣು ಒಪ್ಪಿ ಪರಸ್ಪ ರ ಹಾರಗಳನ್ನು ಬದಲಾಯಿಸಿ ಕೊಂಡರೆ ಅಥವಾ ಉಂಗುರ ತೊಡಿಸುವ ಮೂಲಕ ಸರಳವಾಗಿ ಮದುವೆಯ ಸಮಾರಂಭವನ್ನು ಮುಗಿಸಿದರೆ ಅದಕ್ಕೆ ಹಿಂದೂ ವಿವಾಹ ಕಾಯ್ದೆ ಯಡಿ ಮನ್ನ ಣೆ ಸಿಗುತ್ತ ದೆ ಎಂದು ನ್ಯಾ . ಎಸ್. ರವೀಂದ್ರ ಭಟ್ ಹಾಗೂ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಮಹತ್ವ ದ ತೀರ್ಪು ನೀಡಿದೆ. ಅರ್ಚಕರ ಉಪಸ್ಥಿ ತಿ ಇಲ್ಲದೆಯೂ ನಡೆಯುವ ವಿವಾಹಕ್ಕೆ ಕಾನೂನಿನ ಅಡಿಯಲ್ಲಿ ಮನ್ನ ಣೆ ನೀಡುವುದಕ್ಕೆ ಹಿಂದೂವಿವಾಹ ಕಾಯ್ದೆ ಯಡಿ ಅವಕಾಶ ಇದೆ. ಸಂಬಂಧಿಕರು, ಗಣ್ಯ ರು, ಬಂಧು- ಮಿತ್ರರು ಮತ್ತು ಇತರ ವ್ಯ ಕ್ತಿಗಳ ಸಮ್ಮು ಖದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋ ಕ್ತವಾಗಿ ನಡೆಯುವ ಮದುವೆ ಸಮಾರಂಭಕ್ಕೆ ಸೆಕ್ಷನ್ 7(ಎ) ಅನ್ವ ಯಿಸುತ್ತ ದೆ ಎಂಬುದನ್ನು ನ್ಯಾ ಯಪೀಠ ಹೇಳಿದೆ.

Post a Comment