ರೈಲ್ವೆ ಟಿಕೆಟ್ ಖರೀದಿ ಇನ್ನಷ್ಟು ಸುಲಭ! ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಕ್ಷಣದಲ್ಲೆ ಟಿಕೆಟ್
ನಿಲ್ದಾಣದಲ್ಲಿ ಖರೀದಿಸುವ ರೈಲ್ವೆ ಟಿಕೆಟ್‌ಗಾಗಿ ಸರತಿಯಲ್ಲಿ ನಿಂತು ಕಾಯಬೇಕಿಲ್ಲ. ಇನ್ನು ಮುಂದೆ ಪ್ರತಿ ನಿಲ್ದಾಣಗಳಲ್ಲಿಯೂ ಕ್ಯೂಆರ್ ಕೋಡ್ ಒಳಗೊಂಡ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕ್ಷಣ ಮಾತ್ರದಲ್ಲಿ ಟಿಕೆಟ್ ಕೈ ಸೇರಲಿದೆ.ರೈಲ್ವೆ ಇಲಾಖೆಯು ತನ್ನ ಅಪ್ಲಿಕೇಶನ್ ಮಾರ್ಪಡಿಸುವ ಮೂಲಕ ಟಿಕೆಟ್ ವಿತರಣೆಯಲ್ಲಿ ಹೊಸ ಬದಲಾವಣೆ ತಂದಿದೆ.
ಮೊಬೈಲ್‌ನಲ್ಲಿಯೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಕ್ಷಣವೇ ಟಿಕೆಟ್ ಪಡೆಯಬಹುದಾಗಿದೆ.ಹಲವು ನಿಲ್ದಾಣಗಳಲ್ಲಿ ಈ ಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ ಪರಿಣಾಮ ಇದರಿಂದ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವವರ ಪ್ರಮಾಣ ಶೇ.30ರಷ್ಟು ಇಳಿಕೆಯಾಗಿದೆ.
ತಾಂತ್ರಿಕ ಬದಲಾವಣೆಯ ಈ ಯುಗದಲ್ಲಿ ಸರತಿ ಸಾಲಿನಲ್ಲಿ ನಿಲ್ಲದೇ ಸುಲಭವಾಗಿ ಟಿಕೆಟ್ ಖರೀದಿಸಲು ರೈಲ್ವೆ 'ಯುಟಿಎಸ್' ಎಂಬ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದೆ. ಯುಟಿಎಸ್ ಆ್ಯಪ್ ಮೂಲಕ ಪ್ರಯಾಣಿಕರು, ಕಾಯ್ದಿರಿಸದ ಸಾಮಾನ್ಯ ಪ್ರಯಾಣದ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು.
ಆದರೆ, ಈ ಅಪ್ಲಿಕೇಶನ್‌ನಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ಅದನ್ನು ಸರಿಪಡಿಸುವ ಮೂಲಕ ಯುಡಿಎಸ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ನಿಲ್ದಾಣಗಳಲ್ಲಿಇರುವ ಕ್ಯೂಆರ್ ಕೋಡ್ ಅನ್ನು ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ಹೊಸ ಆಯ್ಕೆಯನ್ನು ನೀಡಲಾಗಿದೆ.

Post a Comment