ಚಿಣ್ಣರ ಬಿಂಬ ಐರೋಲಿ ಶಿಬಿರಮಕ್ಕಳ ಪ್ರತಿಭಾನ್ವೇಷಣ
ತುಳು ಕನ್ನಡ ಮಕ್ಕಳಿಗೆ ಚಿಣ್ಣರಬಿಂಬ ಒಂದು ಜೀವ ನಾಡಿ, ನಾನು ಕೂಡ ಆದರ ಫಲಾನುಭವಿ. :ಜಯಪ್ರಕಾಶ್ ಶೆಟ್ಟಿ
ಚಿಣ್ಣರ ಬಿಂಬ_ ಐರೋಲಿ ಶಿಬಿರದ ಮಕ್ಕಳ ಪ್ರತಿಭಾನ್ವೇಷಣ ಕಾರ್ಯಕ್ರಮವು ಆಗಸ್ಟ್ 27ರಂದು ರವಿವಾರ ಸೆಂಟ್ ಕ್ಸೇವಿಯರ್ ಹೈಸ್ಕೂಲ್ ಸೆಕ್ಟರ್ 6 ರಲ್ಲಿ ನಡೆಯಿತು. ಶಿಬಿರದ ಮಕ್ಕಳ ಛದ್ಮ ವೇಷದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು .ಭಾಷಣ, ಭಾವಗೀತೆ ,ಜಾನಪದ ಗೀತೆ , ಏಕಪಾತ್ರಾಭಿನಯ, ಪಾಲಕರಿಗಾಗಿ ದೇಶಭಕ್ತಿ ಗೀತೆಗಳ ಸ್ಪರ್ಧೆ ನಡೆಯಿತು. ಹಾಗೆಯೇ ಮಕ್ಕಳ ಸಾಮೂಹಿಕ ಭಜನೆ, ಬಳಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನವಿ ಮುಂಬೈ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಜಯಪ್ರಕಾಶ್ ಶೆಟ್ಟಿಯವರು ನನ್ನ ಮಕ್ಕಳು ಚಿಣ್ಣರ ಬಿಂಬದಲ್ಲಿ ಕನ್ನಡ ಕಲಿತಿದ್ದರಿಂದ ಇಂದು ಅವರಿಗೆ ನಮ್ಮ ತಾಯ್ನಾಡಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯಲು ಸುಲಭವಾಯಿತು. ಮುಂಬೈ ಮಹಾನಗರದಲ್ಲಿ ಕನ್ನಡಕ್ಕಾಗಿ ಶ್ರಮಿಸುವ ರುವಾರಿ ಪ್ರಕಾಶ್ ಭಂಡಾರಿಯವರಿಗೆ ನಾನು ಚಿರಋಣಿಯಾಗಿದ್ದೇನೆ. ಗೀತಾ ಹೇರಳ ಹಾಗೂ ಶಿಕ್ಷಕ ವೃಂದದವರಿಗೂ ನಾನು ಆಭಾರಿಯಾಗಿದ್ದೇನೆ. ತುಳು ಕನ್ನಡ ಮಕ್ಕಳಿಗೆ ಚಿಣ್ಣರಬಿಂಬ ಒಂದು ಜೀವ ನಾಡಿ, ನಾನು ಕೂಡ ಆದರ ಫಲಾನುಭವಿ. ನನ್ನ ಸಹಕಾರ ಚಿಣ್ಣರ ಬಿಂಬದೊಂದಿಗೆ ಎಂದೆಂದಿಗೂ ಇದೆ" ಎಂದು ತಮ್ಮ ಅನುಭವದ ಮಾತನ್ನು ಹೇಳಿದರು.
ಇನ್ನೋರ್ವ ಗೌರವಾನ್ವಿತ ಅತಿಥಿಯಾಗಿ ಶ್ರೀಮತಿ ಶುಭ ಕೋಟಿಯನ್ ರವರು ನಾವು ಚಿಕ್ಕವರಿರುವಾಗ ಇಂತಹ ಒಂದು ಅವಕಾಶದಿಂದ ವಂಚಿತರಾದೆವು. ಇಲ್ಲಿ ಬಂದು ಮಕ್ಕಳ ಇಂತಹ ಒಂದು ಕಾರ್ಯಕ್ರಮ ಅವರ ಪ್ರತಿಭೆಯನ್ನು ನೋಡುವಾಗ ಮನಸ್ಸಿಗೆ ತುಂಬಾ ಸಂತೋಷವಾಯಿತು ಮಕ್ಕಳ ಭಜನೆಯನ್ನು ಕೇಳುವಾಗ ಇದರ ಹಿಂದೆ ಇರುವ ಭಜನೆ ಶಿಕ್ಷಕಿಯ ಪರಿಶ್ರಮ ಎದ್ದು ತೋರುತ್ತದೆ. ಹಾಗೆಯೆ ಶಿಕ್ಷಕರ ಪಾತ್ರವನ್ನು ಕೊಂಡಾಡಿದರು.
ಕೇಂದ್ರೀಯ ಸಮಿತಿಯ ಸದಸ್ಯರಾದ ಗೀತಾ ಹೇರಳರವರು ಚಿಣ್ಣರ ಬಿಂಬ ಒಂದು ದೊಡ್ಡ ಕುಟುಂಬವಿದ್ದಂತೆ .ಇಲ್ಲಿ ಯಾವುದೇ ತಾರತಮ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮಕ್ಕಳನ್ನು ಸುಸಂಸ್ಕೃತ ರನ್ನಾಗಿಸುವ ಉದ್ದೇಶದಿಂದ ಪ್ರಕಾಶ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಚಿಣ್ಣರ ಬಿಂಬದ ಸ್ಥಾಪನೆಯಾಯಿತು.ಮಕ್ಕಳ ಜೊತೆಗೆ ನಾವು ಪಾಲಕರಿಗೂ ಬೆಳೆಯಲು ಅವಕಾಶ ಕೊಡುತ್ತೇವೆ. ಅವರನ್ನು ಇನ್ನು ಎತ್ತರಕ್ಕೆ ಬೆಳೆಸಲು ಪ್ರಯತ್ನಿಸುತ್ತೇವೆ . ಹಿರಿಯರಿಗೆ ಗೌರವ ,ದೇವರಲ್ಲಿ ಭಯ ಭಕ್ತಿ, ನಮ್ಮ ಸನಾತನ ಹಿಂದೂ ಸಂಸ್ಕೃತಿಯ ಬಗ್ಗೆ ಅಪಾರ ಪ್ರೇಮವಿದ್ದರೆ ನಾವು ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೊರ್ವ ಕೇಂದ್ರ ಸದಸ್ಯೆ ಭಾರತಿ ಹೆಗಡೆ ಯವರು "ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವನ್ನು ಭಗವಂತ ಮೆಚ್ಚುತ್ತಾನೆ. ನಮ್ಮೊಳಗೆ ಪ್ರೀತಿ ತುಂಬಿದ ಹೃದಯ ಇರಬೇಕು. ಅದರಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಖಂಡಿತ ಉತ್ತಮ ಫಲಿತಾಂಶವನ್ನು ಪಡೆಯಬಹುದು," ಎಂದು ನುಡಿದರು.
ವಲಯ ಮುಖ್ಯಸ್ಥೆ ಆಶಾ ಪೂಜಾರಿಯವರು ಚಿಣ್ಣರ ಬಿಂಬದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕು. ಎಲ್ಲರು ಅದ್ಭುತ ಪ್ರದರ್ಶನ ನೀಡಿದಿರಿ ನೋಡಿ ಮನಸ್ಸು ಪ್ರಸನ್ನವಾಯಿತು. ಚಿಣ್ಣರ ಬಿಂಬದಲ್ಲಿ ನಾಲ್ಕು ವರ್ಷ ಕಲಿತು ಹೋದ ಮಕ್ಕಳು ಮುಂದೆ ಬಂದು ಚಿಣ್ಣರ ಬಿಂಬಕ್ಕೆ ತಮ್ಮ ಸೇವೆಯನ್ನು ನೀಡಬೇಕು. ಪಾಲಕರ ತುಂಬು ಸಹಕಾರದಿಂದ ಚಿಣ್ಣರ ಬಿಂಬ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ವೇದಿಕೆಯಲ್ಲಿ ವಲಯ ಸಾಂಸ್ಕೃತಿಕ ಮುಖ್ಯಸ್ಥೆ ರಾಜೇಶ್ವರ್ ಶೆಟ್ಟಿ, ಪ್ರಾದೇಶಿಕ ಮುಖ್ಯಸ್ಥೆ ಕ್ಷಮಾ ತಮಾನ್ಕರ್ , ಶಿಬಿರ ಮುಖ್ಯಸ್ಥೆ ಉಷಾ ಶೆಟ್ಟಿ ಮತ್ತು ಸಾಂಸ್ಕೃತಿಕ ಮುಖ್ಯಸ್ಥೆ ಸುಹಾಸಿನಿ ರಾವ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಶ್ರೀಮತಿ ಸವಿತಾ ಶೆಟ್ಟಿ ಹಾಗೂ ಶ್ರೀಮತಿ ಪ್ರತಿಭಾ ರಾವ್ ಆಗಮಿಸಿದರು . ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಇವರ ಪರಿಚಯವನ್ನು ಕ್ರಮವಾಗಿ ಲಕ್ಷ್ಮಿ ದೇವಾಡಿಗ ಹಾಗೂ ಜಗದೇವಿ ದಳಗಡೆಯವರು ಮಾಡಿದರು. ಇವರು ತಮ್ಮ ಹಿತನುಡಿಯಲ್ಲಿ ಮಕ್ಕಳು ಸಮಯದ ಸದುಪಯೋಗವನ್ನ ಮಾಡಲು ಕಲಿಯಬೇಕು.ಹಾಗೆಯೇ ಪ್ರಸ್ತುತಪಡಿಸುವ ರೀತಿಯಲ್ಲಿ ಸುಧಾರಣೆಯಾಗಬೇಕು. ಚರ್ಚೆಗೆ ಕೊಟ್ಟ ವಿಷಯದ ಬಗ್ಗೆ ಅರಿತು ಮಾತಾಡಿದರೆ ಆ ವಿಷಯಕ್ಕೆ ಸಾರ್ಥಕತೆಯಾಗುತ್ತದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಳೆದ ವರ್ಷದ ಶಿಬಿರ ಮುಖ್ಯಸ್ಥೆ ಸುಜಾತ ಶೆಟ್ಟಿ ಹಾಗೂ ಸಾಂಸ್ಕೃತಿಕ ಮುಖ್ಯಸ್ಥೆ ಜಗದೇವಿ ದಳಗಡೆಯವರನ್ನು ಸನ್ಮಾನಿಸಲಾಯಿತು.
ಚಿಣ್ಣರಾದ ಆದಿತಿ ಶೆಟ್ಟಿ ಹಾಗೂ ಸಿದ್ದಿಕ್ಷ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಇಶಾನಿ
ಶೆಟ್ಟಿ ,ಮನಸ್ವಿ ಹಂಡ , ಸಿಯಾ ರಾವ್,ಸಿದ್ಧಿಕ್ಷಾ ಶೆಟ್ಟಿ ,ತ್ರಿಷಿಕಾ ಶೆಟ್ಟಿ ಪ್ರಾರ್ಥನೆಗೈದರು. ನಿನಾದ್ ಶೆಟ್ಟಿ ಮತ್ತು ಕನ್ನಿಕ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು ಇವರಿಗೆ ಶಿಕ್ಷಕಿ ಯಶೋದ ಕಾಂಚನ್ ಸಹಕರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅನೇಕ ಗಣ್ಯ ವ್ಯಕ್ತಿಗಳನ್ನು ಹಾಗೂ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣ ಕಾರ್ಯಕ್ರಮವನ್ನು ರಾಜೇಶ್ವರಿ ಶೆಟ್ಟಿಯವರು ನಿರ್ವಹಿಸಿದರು. ಉಷಾ ಶೆಟ್ಟಿ ಎಲ್ಲರಿಗೂ
ಸ್ವಾಗತ ಕೋರಿದರು. ಸುಜಾತ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಹಾಗೆಯೇ ಸುಹಾಸಿನಿ ರಾವ್ ಧನ್ಯವಾದ ಸಮರ್ಪಿಸಿದರು.
ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಪದಾಧಿಕಾರಿಗಳು, ಪಾಲಕರು ಶಿಕ್ಷಕರು , ಮಕ್ಕಳು, ಹಳೆ ವಿದ್ಯಾರ್ಥಿಗಳು, ಸ್ವಯಂಸೇವಕರು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಮಕ್ಕಳ ಪ್ರತಿಭಾ ಸ್ಪರ್ಧೆಯ ವಿಜೇತರ ಪಟ್ಟಿ
*ಛದ್ಮ ವೇಷ ಸ್ಪರ್ಧೆ*
ಸಿಯಾ ರಾವ್ - ಪ್ರಥಮ
ಶಾರ್ವಿ ಶೆಟ್ಟಿ- ದ್ವಿತೀಯ
ಸಮಾನ್ವಿ ಶೆಟ್ಟಿ - ತೃತೀಯ
*ಕಿರಿಯರ ಭಾಷಣ ಸ್ಪರ್ಧೆ*
ಸಿಯಾ ರಾವ್ -ಪ್ರಥಮ,
ಸಮಾನ್ವಿ ಶೆಟ್ಟಿ -ದ್ವಿತೀಯ,
ಪ್ರಣಾತ್ ಶೆಟ್ಟಿ -ತೃತೀಯ,
*ಕಿರಿಯರ ಜಾನಪದ ಗೀತೆ*
ಮನಸ್ವಿ ಪೂಜಾರಿ -ಪ್ರಥಮ ,
ತೃಷಿಕಾ ಶೆಟ್ಟಿ - ದ್ವಿತೀಯ,
ಸಾಯಿಶಾ ಶೆಟ್ಟಿ - ತೃತೀಯ,
*ಹಿರಿಯರ ಚರ್ಚಾ ಸ್ಪರ್ಧೆ*
ಮಾನ್ವಿತ್ ಶೆಟ್ಟಿ - ಪ್ರಥಮ ,
ದಿಯಾ ಕರ್ಕೇರ - ದ್ವಿತೀಯ,
ಆದಿತಿ ಶೆಟ್ಟಿ - ತೃತೀಯ,
*ಹಿರಿಯರ ಭಾವಗೀತೆ*
ಮನ್ವಿತ್ ಶೆಟ್ಟಿ - ಪ್ರಥಮ ,
ಇಶಾನಿ ಶೆಟ್ಟಿ - ದ್ವಿತೀಯ ,
ಸುಭಿತ್ ಶೆಟ್ಟಿ - ತೃತೀಯ,
**ಹಿರಿಯರ*
*ಏಕಪಾತ್ರಭಿನಯ**
ಮನ್ವಿತ್ ಶೆಟ್ಟಿ - ಪ್ರಥಮ ,
ದಿಯಾ ಕರ್ಕೇರ- ದ್ವಿತೀಯ,
ನಿನಾದ್ ಶೆಟ್ಟಿ - ತೃತೀಯ,
*ಪಾಲಕರ ದೇಶಭಕ್ತಿ ಗೀತೆ*
ಉಷಾ ಶೆಟ್ಟಿ- ಪ್ರಥಮ,
ಅಶ್ವಿನಿ ದೇವಾಡಿಗ-ದ್ವಿತೀಯ,
ವನಿತಾ ಬಂಗೇರ - ತೃತೀಯ,



Post a Comment