ಶ್ರೀಕೃಷ್ಣ ವಿಠಲ ಪ್ರತಿಷ್ಠಾನ, 'ಹರಿಕಥಾ ಸಪ್ಪೋತ್ಸವ’ ಸಮಾರೋಪ ಗಣ್ಯರಿಗೆ ಸನ್ಮಾನ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ಶ್ರೀಕೃಷ್ಣ ವಿಠಲ ಪ್ರತಿಷ್ಠಾನ, ಮುಂಬಯಿ ಇದರ ವತಿಯಿಂದ ಜುಲೈ 31 ರಂದು ಆರಂಭಗೊಂಡ ಏಳು ದಿನಗಳ 'ಹರಿಕಥಾ ಸಪ್ಪೋತ್ಸವ’ ಕಾರ್ಯಕ್ರಮ ಆಗಸ್ಟ್ 6 ರಂದು ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಪೇಜಾವರ ಮಠದ 'ಶ್ರೀ ವಿಶ್ವೇಶ ತೀರ್ಥ ಸಭಾಗೃಹ'ದಲ್ಲಿ ಪೇಜಾವರ ಮಠದ ಪೂರ್ಣ ಸಹಯೋಗದೊಂದಿಗೆ ಸಮರೂಪಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೇಜಾವರ ಮಠದ ಪ್ರಬಂಧಕರಾದ ಡಾ. ರೇಂಜಳ ರಾಮದಾಸ ಉಪಾಧ್ಯಾಯ, ಬಿ. ಎಸ್. ಕೆ. ಬಿ. ಎಸೋಸಿಯೇಷನ್ ನ ಅಧ್ಯಕ್ಷರಾದ ಡಾ. ಸುರೇಶ್ ರಾವ್, ಪೂರ್ಣಪ್ರಜ್ಞ ಎಜುಕೇಶನ್ ಟ್ರಷ್ಟ್ ದಹಿಸರ್ ಇದರ ಸಿ ಇ ಓ ಸರ್ವಜ್ಞ ವಿ. ಉಡುಪ, ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಒರ್ಗನಿಕ್ ಇಂಡಸ್ಟ್ರೀಸ್ ಮುಂಬಯಿಯ ಸಿ.ಎಂ.ಡಿ ಆನಂದ ಶೆಟ್ಟಿ .ಬಿಲ್ಲವರ ಎಸೋಸಿಯೇಷನ್ ಮುಂಬಯಿಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್, ಬೋಂಬೇ ಬಂಟ್ಸ ಅಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಉಮಾ ಕೃಷ್ಣ ಶೆಟ್ಟಿ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಬಂಟರ ಸಂಘ ಮುಂಬಯಿ ಮಧ್ಯಮ ವಲಯದ ಸಮನ್ವಯಕರಾದ, ಐಕಳ ಗುಣಪಾಲ್ ಶೆಟ್ಟಿ, ಬಂಟರ ಸಂಘ ಮುಂಬಯಿ ನ್ಯಾಯ ಮಂಡಳಿಯ ಅಧ್ಯಕ್ಷರಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ ಮತ್ತು ಇವರು ಪ್ರತಿಷ್ಠಾನದ ಪದಾಧಿಕಾರಿಗಳದ ವಿಶ್ವಸ್ಥರಾದ ಸುಮಾ ವಿ. ಭಟ್, ಅವಿನಾಶ್ ಶಾಸ್ತ್ರಿ (ಕೋಶಾಧಿಕಾರಿ), ಕಳತ್ತೂರು ವಿಶ್ವನಾಥ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಸುರೇಂದ್ರ ಎ. ಪೂಜಾರಿ, ರಮೇಶ್ ಡಿ. ಸಾವಂತ್, ಕಾರ್ಯದರ್ಶಿ ಸುಶೀಲಾ ದೇವಾಡಿಗ, ಉಪ ಕಾರ್ಯದರ್ಶಿಗಳಾದ ಶ್ಯಾಮಸುಂದರ್ ಸಾಲಿಯಾನ್, ನವೀನ್ ಪಡು ಇನ್ನ, ಮತ್ತು ಹ್ಯಾರಿ ಸೀಕ್ವೆಯರ. ಜಗನ್ನಾಥ್ ಪುತ್ರನ್ . ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯದರ್ಶಿ ಶ್ಯಾಮಲಾ ಶಾಸ್ತ್ರಿ ಮೊದಲಾದವರು ಗೌರವಿಸಿದರು.
ಹರಿಕಥೆ ಸಹಕರಿಸಿದ ಶೇಖರ್ ಸಸಿಹಿತ್ತ್ಲು, ಜನಾರ್ಧನ ಸಾಲ್ಯಾನ್, ಪ್ರಶಾಂತ್ ಜತ್ತನ್, ಶ್ಯಾಮ್ ಸಾಲ್ಯಾನ್, ಸಂಜಯ್ ನಾಯಕ್, ದಿನೇಶ್ ಕರ್ಕೇರ, ಸುಧೀರ್, ಜಗನ್ನಾಥ್ ಕಾಂಚನ್, ಜಗನ್ನಥ್ ಪುತ್ರನ್ ಮೊದಲಾದವರನ್ನು ಗೌರವಿಸಲಾಯಿತು.











Post a Comment