".

Header Ads

ಉಡುಪಿ:- ಹೆರಿಗೆ ವೇಳೆ ಉಂಟಾದ ಗಾಯದ ನೋವು ತಾಳಲಾಗದೆ ಬಾಣಂತಿಯೊಬ್ಬರು ಆತ್ಮಹತ್ಯೆ

 


ಹೆರಿಗೆ ವೇಳೆ ಉಂಟಾದ ಗಾಯದ ನೋವು ತಾಳಲಾಗದೆ ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವೇಣೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಅವರ ಪತ್ನಿ ಸುಪ್ರೀತಾ (25)  ಉಡುಪಿಯಲ್ಲಿ ಹೆರಿಗೆಯಾಗಿದ್ದು, ಈ ಸಮಯ ಉಂಟಾದ ಗಾಯಕ್ಕೆ ಬಳಿಕ ಜಾರಿಗೆದಡಿ ಎಂಬಲ್ಲಿ ಹೊಲಿಗೆ ಹಾಕಲಾಗಿತ್ತು.

ಅನಂತರ ವಿಪರೀತ ನೋವು ಕಂಡುಬಂದಿದ್ದು  ನೋವು ತಾಳಲಾಗದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತತ್‌ಕ್ಷಣ ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Powered by Blogger.