".

Header Ads

ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1: ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

 


ಚಂದ್ರಯಾನ 3ರ ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್​1 ಮೇಲೆ ಎಲ್ಲರ ಭರವಸೆ ನೆಟ್ಟಿದೆ. ಇದೀಗ ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳ ಬದಲಿಸಿ ಭೂಮಿಯಿಂದ ಹೊರಗೆ ಬಂದಿದೆ, ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ.ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಅಧ್ಯಯನ ಮಾಡಲಿದೆ. ಭೂಮಿಯ ಕಕ್ಷೆಯಿಂದ ಹೊರಬಂದು ಆದಿತ್ಯ L-1 ಅಧ್ಯಯನ ಆರಂಭಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಗಳನ್ನು ಅಳೆಯಲು ಸಹಾಯ ಮಾಡಲಿದೆ. ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್‌ನ ಉದ್ದೇಶವು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವುದಾಗಿದೆ. ಇಲ್ಲಿಂದ ನೌಕೆಯು 15 ಲಕ್ಷ ಕಿಲೋಮೀಟರ್ ಪ್ರಯಾಣ ಆರಂಭಿಸಲಿದೆ. ಇದು ಜನವರಿ 2024 ರಲ್ಲಿ 110 ದಿನಗಳ ನಂತರ ಲಾಗ್ರಾಂಜಿಯನ್ ಪಾಯಿಂಟ್ 1 ಅನ್ನು ತಲುಪುತ್ತದೆ.

Powered by Blogger.