ವಿಶ್ವಕಪ್ 2023 ಅಧಿಕೃತ ಗೀತೆ ವಿರುದ್ಧ ಅಭಿಮಾನಿಗಳು ಗರಂ!
2023 ರ ವಿಶ್ವಕಪ್ ಅಧಿಕೃತ ಗೀತೆಗೆ ಐಸಿಸಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿನ 2021 ಮತ್ತು 2011 ರ ಆವೃತ್ತಿಗಳ ಗೀತೆಗಳಂತೆ ಕ್ರಿಕೆಟ್ ಅಭಿಮಾನಿಗಳ ನಾಡಿಮಿಡಿತ ಸೆರೆಹಿಡಿಯಲು ಸಾಧ್ಯವಾಗದ ಕಾರಣ ಐಸಿಸಿಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಭಾರತದಲ್ಲಿ ಅಕ್ಟೋಬರ್ 5 ರಂದು ಪ್ರಾರಂಭವಾಗುವ ವಿಶ್ವಕಪ್ 2023 ರ ಅಧಿಕೃತ ಗೀತೆಯನ್ನು ಐಸಿಸಿ ಬುಧವಾರ ಬಿಡುಗಡೆ ಮಾಡಿದೆ. 'ದಿಲ್ ಜಶ್ನ್ ಬೋಲೆ' ಎಂದು ಕರೆಯಲಾಗುವ ಈ ಗೀತೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಬಾಲಿವುಡ್ನ ಅತ್ಯಂತ ಅಪೇಕ್ಷಿತ ಸಂಯೋಜಕರಲ್ಲಿ ಒಬ್ಬರಾದ ಪ್ರೀತಂ ಸಂಗೀತ ರಚಿಸಿದ್ದಾರೆ. ಈ ಗೀತೆಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕೂಡ ಇದ್ದಾರೆ.ಮೂರು ನಿಮಿಷ 22 ಸೆಕೆಂಡುಗಳ ಗೀತೆಯು 'ಒನ್ ಡೇ ಎಕ್ಸ್ಪ್ರೆಸ್' ಹೆಸರಿನ ಕಾಲ್ಪನಿಕ ರೈಲು ಬೋಗಿಯೊಂದರಲ್ಲಿ ರಣವೀರ್ ಮತ್ತು ಸಹಕಲಾವಿದರು ನರ್ತಿಸುವ ದೃಶ್ಯಗಳಿವೆ.
ಐಸಿಸಿಯ ಪ್ರಯತ್ನಗಳ ಹೊರತಾಗಿಯೂ, ಹಾಡಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

Post a Comment