".

Header Ads

ಅಕ್ಟೋಬರ್ 8 ರಂದು ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿಯ ಆಯೋಜನೆಯಲ್ಲಿ "ದಾಸರ ಭಜನಾ ಸ್ಪರ್ಧೆ -2023 "

ಅಕ್ಟೋಬರ್ 8 ರಂದು  ಶ್ರೀ ಮಹಾವಿಷ್ಣು ಮಂದಿರ,  ಡೊಂಬಿವಲಿಯ ಆಯೋಜನೆಯಲ್ಲಿ  "ದಾಸರ ಭಜನಾ ಸ್ಪರ್ಧೆ -2023 " 

ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ ಇದರ ಆಶ್ರಯದಲ್ಲಿ  ತುಳು -ಕನ್ನಡಿಗರ ಸಂಘ ಸಂಸ್ಥೆ ಹಾಗು ಭಜನಾ ಮಂಡಳಿಗಳಿಗಾಗಿ "ದಾಸರ ಭಜನಾ ಸ್ಪರ್ಧೆ -2023 " ಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ವಿವರ ಹಾಗು ನಿಯಮಗಳು ಈ ಕೆಳಗೆ ನೀಡಲಾಗಿದೆ. 

ಸ್ಪರ್ಧೆಯ ಕುರಿತು :
ಸ್ಪರ್ಧೆಯ ದಿನ ಹಾಗು ಸಮಯ : 08 .10 .2023 ಆದಿತ್ಯವಾರ ಮದ್ಯಾನ  1 ರಿಂದ  ಆರಂಭ 
ಸ್ಥಳ : ಶಿವಂ ( ಮೆಜಿಸ್ಟಿಕ್ ಬ್ಯಾಂಕ್ವೆಟ್ ಹಾಲ್)  
NEAR L.I.C OFFICE, MIDC FIRE BRIGADE ROAD, DOMBIVLI EAST.

ಪ್ರವೇಶ ಪತ್ರ ಕಳುಹಿಸಲು ಕೊನೆಯ ದಿನಾಂಕ  :   30.09.2023 

 “ಉಚಿತ - ಪ್ರವೇಶ “  

ಪ್ರಥಮ ಬಹುಮಾನ : 15,000 /-
ದ್ವಿತೀಯ ಬಹುಮಾನ : 10,000/- 
ತೃತೀಯ ಬಹುಮಾನ : 7,500 /-
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು.
ಅತ್ತ್ಯುತ್ತಮ  ಶಿಸ್ತಿನ ತಂಡವನ್ನು ಗುರುತಿಸಿ ಗೌರವಿಸಲಾಗುವುದು. 

ಸ್ಪರ್ಧಾ ನಿಯಮಗಳು :-
1. ತುಳು ಕನ್ನಡಿಗರ ಸಂಘ ಹಾಗು ಭಜನಾ ಮಂಡಳಿಗಾಗಿ ಮಾತ್ರ ಅವಕಾಶ.
2 . ನಿಗದಿತ ಸಮಯಕ್ಕಿಂತ  ಅರ್ಧ ಘಂಟೆ ಮುಂಚಿತವಾಗಿ ಹಾಜರಾಗಿ ತಮ್ಮ ಪ್ರವೇಶ ಪತ್ರದ ಬಗ್ಗೆ ವಿಚಾರಿಸಿ ಡ್ರೀಡೀಕರಿಸಿಕೊಳ್ಳಬೇಕು.
3  ಫಲಿತಾಂಶ ಹಾಗು ಬಹುಮಾನ ವಿತರಣೆ ಆದೇ ದಿನ ಕಾರ್ಯಕ್ರಮದ ಕೊನೆಗೆ ನಡೆಯಲಿದೆ.
4. ವಯೋಮಿತಿ 22 ವರ್ಷ ಹಾಗು ಕೆಳಗಿನ ಮಕ್ಕಳಿಗೆ ಮಾತ್ರ ಅವಕಾಶ. (ಆಧಾರ್ ಕಾರ್ಡ್ ಕಡ್ಡಾಯ)
5 .ಹಿನ್ನಲೆ ವಾದ್ಯದಲ್ಲಿ ಹಾರ್ಮೋನಿಯಂ, ತಬಲ,ತಾಳ ಕ್ಕೆ ಮಾತ್ರ ಅವಕಾಶ, ವಿದ್ದುಧುಪಕರಣಗಳನ್ನು ಬಳಸುವಂತಿಲ್ಲ.
6 . ಮೊದಲು ಪ್ರವೇಶ ಪತ್ರ ಸಲ್ಲಿಸಿದ 15  ತಂಡಗಳಿಗೆ ಮಾತ್ರ ಅವಕಾಶ.
7 . ಪಕ್ಕವಾದ್ಯದವರನ್ನು (ಹಾರ್ಮೋನಿಯ್ ತಬಲ) ಬಿಟ್ಟು ಕನಿಷ್ಠ 9  ಮಂದಿ ಭಜಕರಿರಬೇಕು. 
8 . ಮೂಲ ಹಾಡುಗಾರರು ಕನಿಷ್ಠ 3 ಮಂದಿ ಹಾಡಬೇಕು. (ದಾಸರ ಭಜನೆಗೆ ಮಾತ್ರ ಅವಕಾಶ)
09 .ಒಬ್ಬ ಸದಸ್ಯನಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶ. (ತಬಲಾ ಮತ್ತು ಹಾರ್ಮೋನಿಯಂ ವಾದಕರಿಗೆ ನಿರ್ಬಂಧಗಳಿಲ್ಲ)
10 . ಪ್ರತಿ ತಂಡಕ್ಕೆ 15 ನಿಮಿಷಗಳ ಕಾಲಾವಕಾಶ ಮಾತ್ರ.
11 . ನಿಗದಿತ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು.
12 . ತೀರ್ಪುಗಾರರ ತೀರ್ಮಾನವೇ ಅಂತಿಮ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :, ಅರವಿಂದ್ ಪದ್ಮಶಾಲಿ -9819442570 , ಲೀಲೇಶ್ ಸುವರ್ಣ -9920828278 , ಇಂದುಶೇಖರ್ ಸುವರ್ಣ -8286331700 ,ಸಚಿನ್ ಪೂಜಾರಿ-9869188260. 

ಈ ಕರೆಗೆ ಓಗೊಟ್ಟು ತುಂಬು ಮನದಿಂದ ತಾವು ಸಹಕರಿಸಬೇಕಾಗಿ  ಆಡಳಿತ ಸಮಿತಿಯ ಅನುಮತಿಯ ಮೇರೆಗೆ, ಗೌ.ಪ್ರ.ಕಾರ್ಯದರ್ಶಿ ಸಚಿನ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.