".

Header Ads

ಮೀರಾರೋಡು ಯುವ ಮಿತ್ರ ಮಂಡಳಿ ಇದರ 27 ನೇ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ಸಂಪನ್ನ


(ಚಿತ್ರ ವರದಿ : ರಮೇಶ್ ಅಮೀನ್)

ಮೀರಾರೋಡು ಪೂರ್ವದ ಭಾರತಿ ಪಾರ್ಕ್, ಯುನಿಟ್ ಟವರ್ ,   ಶ್ರೀ ಲಕ್ಷ್ಮೀನಾರಾಯಣ ಭಜನ ಮಂದಿರದ  ಸಮೀಪದಲ್ಲಿ ನಡೆಯುತ್ತಿದ್ದ  ಮೀರಾರೋಡು ಯುವ ಮಿತ್ರ ಮಂಡಳಿ ಇದರ 27 ನೇ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವವು ಸೆ. 28 ರಂದು ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಶೋಭಾಯಾತ್ರೆಯಲ್ಲಿ ಜಲಸ್ತಂಭನಗೊಳಿಸುವ ಮೂಲಕ ಸಂಪನ್ನಗೊಂಡಿತು. 

ಅಧ್ಯಕ್ಷ ಜಿತೇಂದ್ರ  ಸನಿಲ್, ಉಪಾಧ್ಯಕ್ಷ ಹರೀಶ್ ರೈ , ಗೌ.ಕಾರ್ಯದರ್ಶಿ ಪಂಜದ ಗುತ್ತು ಸಂಪತ್  ಶೆಟ್ಟಿ  , ಕೋಶಾಧಿಕಾರಿ ವಿಜಯ ಸುವರ್ಣ ನೇತೃತ್ವದಲ್ಲಿ  ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಉಡುಪ, ಮಹಿಳಾ ಸದಸ್ಯೆಯರ ಮತ್ತು ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಉತ್ಸವಕ್ಕೆ  ಸೆ.19 ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.  


 ಇದೇ ಸಂಧರ್ಭದಲ್ಲಿ ವಿದ್ವಾನ್ ರಾಧಾಕೃಷ್ಣ ಭಟ್ ಅವರ ಪೌರೋತ್ಯದಲ್ಲಿ  ಮಹಾಗಣಪತಿಯ ಪ್ರಾರ್ಥನೆಯೊಂದಿಗೆ ಸ್ವತ್ತಿ ಪಂಚಗವ್ಯ ಪುಣ್ಯವಾಚನ ,ಶುದ್ದಿಕರಣ, ಕಳಸ ಸಂಪ್ರೋಕ್ಷಣೆ  ತದ ನಂತರ ಗಣಪತಿ ದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡಿ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರತಿದಿನ ಆರತಿ, ಭಜನೆ,  ರಾತ್ರಿ ಅನ್ನಸಂತರ್ಪಣೆ, ಸೆ. 23 ರಂದು ಸ್ಥಳೀಯ ಮಕ್ಕಳಿಂದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ, ಜರಗಿತು. 24 ರಂದು ಸತ್ಯನಾರಾಯಣ ಪೂಜೆ, ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ.  27 ರಂದು ರಾತ್ರಿ ಜಿತೇಂದ್ರ  ಸನಿಲ್  ದಂಪತಿ ,  ಪಂಜದ ಗುತ್ತು ಸಂಪತ್  ಶೆಟ್ಟಿ ದಂಪತಿ,  ಹರೀಶ್ ರೈ  ಅವರ ಪೂಜಾ ಸಂಕಲ್ಪದಲ್ಲಿ  ರಂಗಪೂಜೆ ,ದೀಪೋತ್ಸವ ನೆರವೇರಿತು. 

 
ಸಕಲ ಇಷ್ಟಾರ್ಥವನ್ನು ಪೂರೈಸುವ ಗಣಪತಿಯು ಜ್ಞಾನ ಮತ್ತು ಭಾವನ್ಮಾತಕ ಸಂಬಂಧಗಳ ಅಧಿದೇವತೆ. ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳೊಂದಿಗೆ ವಿಶ್ವದಾದ್ಯಂತ ಆಚರಿಸುವ ಗಣೇಶೋತ್ಸವ ಆನೇಕತೆಯಲ್ಲಿ ಏಕತೆಯನ್ನು ಸೃಷ್ಟಿಸುತ್ತದೆ.. ಅಶಕ್ತರ ಕಷ್ಟ ಕಾರ್ಪಣ್ಯಗಳಿಗೆ ಆರ್ಥಿಕ ನೆರವು,  ಪ್ರತಿಭೆಗಳಿಗೆ ವೇದಿಕೆ, ಸಾಧಕರಿಗೆ ಗೌರವ ನೀಡುವುದು ಮತ್ತು ಸಮಾಜ ಮುಖಿ ಕೆಲಸಗಳು ನಮ್ಮ ಸಂಸ್ಥೆಯ ಉದ್ದೇಶವಾಗಿದೆ….ಜಿತೇಂದ್ರ  ಸನಿಲ್, ಅಧ್ಯಕ್ಷರು.ಮೀರಾರೋಡು ಯುವ ಮಿತ್ರ ಮಂಡಳಿ ಜಾತ್ಯತೀತವಾಗಿ, ಪಕ್ಷತೀತವಾಗಿ ಸಂಸ್ಕೃತಿಯೊಂದಿಗೆ ಬೆಸೆದು ಕೊಂಡಿರುವ ಗಣಪತಿಯು ಸರ್ವವರ ವಿಘ್ನನಿವಾರಕ. ಸನಾತನ ಧರ್ಮ ಉಳಿಸಲು, ಸಂಸ್ಕಾರ ಬೆಳೆಸಲು ಸಾರ್ವಜನಿಕ ಉತ್ಸವಗಳಿಂದ ಬಿಂಬಿಸಲು ಸಾಧ್ಯವಾಗಿವೆ. ಧೈರ್ಯ ತ್ಯಾಗ ಸರಳತೆ ಸಹಕಾರ ಭಾವನೆಗಳೊಂದಿಗೆ  ಯುವಕರನ್ನು ಸಂಘಟಿಸಿ ಮಾನವೀಯ ಮೌಲ್ಯತೆಯನ್ನು ಕಾಪಾಡುವ.. . ಪಂಜದ ಗುತ್ತು ಸಂಪತ್  ಶೆಟ್ಟಿ  ಗೌ.ಕಾರ್ಯದರ್ಶಿ. ಮೀರಾರೋಡು ಯುವ ಮಿತ್ರ ಮಂಡಳಿ ಲಕ್ಷ್ಮೀನಾರಾಯಣ ಭಜನ ಸಮಿತಿ ಸದಸ್ಯರು, ಸ್ಥಳೀಯ ಸಂಸದರು, ಶಾಸಕರು, ನಗರ  ಸೇವಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ವಿಭಾಗ, ಯುವ ವಿಭಾಗದವರು ಸಹಕರಿಸಿದರು. 

Powered by Blogger.