ಅಯೋಧ್ಯೆ ಮೇಲೆ 'ಐಸಿಸ್' ಟಾರ್ಗೆಟ್: BJP, RSS ನಾಯಕರ ಮೇಲೂ ದಾಳಿಗೆ ಸಿದ್ಧತೆ, ದಿಲ್ಲಿಯಲ್ಲಿ ಸೆರೆಸಿಕ್ಕ ಉಗ್ರರಿಂದ ಸ್ಪೋಟಕ ಮಾಹಿತಿ
ದಿಲ್ಲಿಯಲ್ಲಿ ಬಂಧಿತರಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಸೇರಿದಂತೆ ಮೂವರು ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿಜ್ಜಾಗುತ್ತಿರುವ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಅಲ್ಲದೇ ಬಿಜೆಪಿ, ಆರ್ ಎಸ್ಎಸ್ಎಸ್ ನಾಯಕರ ಮೇಲೂ ದಾಳಿ ನಡೆಸೋದಕ್ಕೆ ಸಿದ್ಧತೆ ಕೈಗೊಂಡಿದ್ದರು ಎಂಬ ಶಾಕಿಂಗ್ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಇದಷ್ಟೇ ಅಲ್ಲದೇ ಈ ಮೂವರು ಬಂಧಿತ ಶಂಕಿತ ಉಗ್ರರು ಕರ್ನಾಟಕದ ಹುಬ್ಬಳ್ಳಿ ಹಾಗೂ ಪಶ್ಟಿಮ ಘಟ್ಟದಲ್ಲಿ ಉಗ್ರ ತರಬೇತಿ ಶಿಬಿರ ಹಮ್ಮಿಕೊಳ್ಳಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಈ ಮೂವರು ಶಂಕಿತ ಉಗ್ರರು ಹುಬ್ಬಳ್ಳಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಶರಾವತಿ ರಕ್ಷಿತಾರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದರು ಎಂಬ ಇನ್ನೊಂದು ವಿಚಾರವೂ ಬೆಳಕಿಗೆ ಬಂದಿದೆ.
ಈ ಹಿನ್ನಲೆಯಲ್ಲೇ ಹುಬ್ಬಳ್ಳಿ ಸುತ್ತಮುತ್ತ ಅರಣ್ಯ ಪ್ರದೇಶಗಳಲ್ಲಿ ಭಯೋತ್ಪಾದನಾ ಕ್ಯಾಂಪ್ ಗಳ ಕುರುಹು ಸಿಗುತ್ತದೆಯೇ ಅಂತ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಯೋಧ್ಯೆಯ ರಾಮಮಂದಿರವನ್ನು ಟಾರ್ಗೆಟ್ ಮಾಡಿದ್ದಂತ ಉಗ್ರರು, ದೆಹಲಿಯ ಅಕ್ಷರಧಾಮ ದೇವಾಲಯ, ಜನನಿಬಿಡ ಮಾರುಕಟ್ಟೆ, ರೈಲ್ವೆ ನಿಲ್ದಾಣಗಳ ಮೇಲೂ ದಾಳಿ ನಡೆಸೋ ಸಂಚು ರೂಪಿಸಿದ್ದರು ಎಂಬ ಶಾಕಿಂಗ್ ಮಾಹಿತಿಯನ್ನು ಬಂಧಿತ ಉಗ್ರರಿಂದ ಬಾಯಿ ಬಿಡಿಸಿರೋದಾಗಿ ತಿಳಿದು ಬಂದಿದೆ.

Post a Comment