ಕನ್ನಡ ಸಂಘ ವರ್ತಕ ನಗರ , ಥಾಣೆ (ರಿ) ಇದರ ವಾರ್ಷಿಕ ಮಹಾಸಭೆ
ಸಂಘದ ಯಶಸ್ಸಿಗೆ ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿಯವರ ನಿಸ್ವಾರ್ಥ ಸೇವೆಯೇ ಕಾರಣ :- ಜಯಂತ್ ಎನ್.ಶೆಟ್ಟಿ
(ವರದಿ ..ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು)
ಕನ್ನಡ ಸಂಘ ವರ್ತಕನಗರ , ಥಾಣೆ(ರಿ), ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 30, ಶನಿವಾರದಂದು ಹೋಟೆಲ್ ವಿನ್ಯಾಸದಲ್ಲಿ ಸಂಪನ್ನ ಗೊಂಡಿತು.
ದೀಪ ಪ್ರಜ್ವಲನೆಯೊಂದಿಗೆ ಸಂಧ್ಯಾ ಶೆಟ್ಟಿಯವರ ಪ್ರಾರ್ಥನೆಯಿಂದ ಪ್ರಾರಂಭಗೊಂಡ ಈ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ರಾದ ಜಯಂತ್ ಎನ್ ಶೆಟ್ಟಿಯವರು ನಮ್ಮ ಸಂಘಕ್ಕೆ 58 ವರ್ಷಗಳ ಇತಿಹಾಸವಿದ್ದರೂ ಮಧ್ಯದಲ್ಲಿ ಉದ್ಭವಗೊಂಡ ಸಮಸ್ಯೆಗಳಿಂದಾಗಿ ಕೆಲವು ಕಾಲ ಸ್ತಬ್ಭಗೊಂಡಿದ್ದು ಮತ್ತೇ ಮಾಜಿ ಕಾರ್ಯಾಧ್ಯಕ್ಷರುಗಳ ಪರಿಶ್ರಮದಿಂದಾಗಿ ಅವರಿಗೆ ಕನ್ನಡದ ಮೇಲಿನ ಅಭಿಮಾನದಿಂದಾಗಿ ತಲೆಯೆತ್ತಿ ನಿಂತದ್ದು ಸಂತಸದ ವಿಷಯ.ಸಂಘದ ಬೆಳವಣಿಗಗೆ ಕರ್ನಾಟಕ ಸರಕಾರದಿಂದ ಅನುದಾನ ಪಡೆಯಲು ಪ್ರಯತ್ನಗಳು ನಡೆಯುತ್ತಿದ್ದು ಬೇಗನೇ ಜಾರಿಯಾಗಬಹುದೆನ್ನುವ ಆಶಯವಿದೆ ಸಂಘಕ್ಕೊಂದು ಸ್ವಂತ ಕಚೇರಿ ಆಗುವ ಸಿದ್ಧೆತೆಯಲ್ಲಿದೆ.ಎಲ್ಲರೂ ಕೈ ಜೋಡಿಸಿದರೆ ಮಾತ್ರ ಆದಷ್ಟು ಬೇಗ ನೆರವೇರಬಹುದು.ಈಗ ನಮ್ಮ ಸಂಘದಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ. ಈ ಯಶಸ್ಸಿಗೆ ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿಯವರ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ. ಮಹಿಳಾ ವಿಭಾಗವು ಕೂಡಾ ಒಳ್ಳೆಯ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದೆ.ಕ್ರೀಡಾ ಸಮಿತಿಯು ಕೂಡಾ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಸಂಘದ ಹೆಸರನ್ನು ಪ್ರಸಿದ್ಧಿಗೊಳಿಸಿದೆ ಎಂದು ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಶುಭ ಮಾತುಗಳನ್ನಾಡಿದರು.
ಸಂಘದ ಕಾರ್ಯದರ್ಶಿ ಶೇಖರ್ ಶೆಟ್ಟಿಯವರು ವಾರ್ಷಿಕ ಅವಧಿಯ ಸಂಘದ ಕಾರ್ಯಕಲಾಪಗಳ ವರದಿಯನ್ನು ವಾಚಿಸಿ ಸಂಘದ ಅಭ್ಯುದಯಕ್ಕಾಗಿ ಶುಭ ಹಾರೈಸಿದರು.
ಸಂಘದ ಕೋಶಾಧಿಕಾರಿಯಾದ ಬಾಲಕೃಷ್ಣ ರೈಯವರು ವಾರ್ಷಿಕ ಅವಧಿಯ ಆಯ ,ವ್ಯಯಗಳ ಲೆಕ್ಕವನ್ನು ಮಂಡಿಸಿ ಸಂಘದ ಹಿತಾಸಕ್ತಿಗಾಗಿ ವಿಚಾರ ತಿಳಿಸಿದರು.
ಮಹಿಳಾ ಕಾರ್ಯಾಧ್ಯಕ್ಷೆ ವಿದ್ಯಾ ಆರ್ .ಶೆಟ್ಟಿಯವರು ನೆರೆದಿದ್ದ ಗಣ್ಯರನ್ನು ಮತ್ತು ಸಭಿಕರನ್ನು ಸ್ವಾಗತಿಸುತ್ತಾ ಮಹಿಳಾ ವಿಭಾಗದ ಆಶ್ರಯದಲ್ಲಿ ಹಳದಿ ಕುಂಕುಮ, ಶಾರದಾ ಪೂಜೆ ,ಆಟಿಯ ಕೂಟ , ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ಕಾರ್ಯವೈಖರಿಯಿಂದ , ದಕ್ಷತೆಯಿಂದ ನಡೆಯುತ್ತಿವೆ.ಇದು ನನ್ನಿಂದ ಒಬ್ಬಳಿಂದ ಸಾಧ್ಯವಿಲ್ಲ. ಪದಾಧಿಕಾರಿಗಳಿಂದ ಮತ್ತು ಎಲ್ಲಾ ಮಹಿಳಾ ಕಾರ್ಯಕಾರಿ ಸಮಿತಿಯ ಸದಸ್ಯೆಯರಿಂದ ಸಾಧ್ಯವಾಗಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು.
ಮಾಜಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿಯವರು ನಮ್ಮ ಸಂಘದ ವಾರ್ಷಿಕ ಸಭೆಗೆ ಎಲ್ಲಾ ಸದಸ್ಯ ಬಾಂಧವರು ಉಪಸ್ಥಿತರಿರಬೇಕು ಎಂದರಲ್ಲದೆ ಎಲ್ಲರ ಸಹಕಾರದಿಂದ ಆದಷ್ಟು ಬೇಗ ಸ್ವಂತ ಕಚೇರಿಯು ನಮ್ಮ ಕನ್ಮಡ ಸಂಘಕ್ಕಾಗಲಿ ಎಂದು ಶುಭ ಹಾರೈಸಿ ಅತ್ಯಮೂಲ್ಯ ಸಲಹೆಯನ್ನು ನೀಡಿದರು.
ಇನ್ನೋರ್ವ ಮಾಜಿ ಅಧ್ಯಕ್ಷ ಸುನೀಲ್ ಶೆಟ್ಟಿಯವರು ನಮ್ಮ ಸಂಘದ ಆಡಳಿತ ಸಮಿತಿಯಲ್ಲಿರುವ ಯಾರಿಗಾದರೂ ಸಕ್ರಿಯರಾಗಿರಲು ಸಮಸ್ಯೆಗಳಿದ್ದರೆ ಅವರ ಜೊತೆಗೆ ಹೊಸಬರಿಗೆ ಆದ್ಯತೆ ನೀಡಿ ಅವರಿಗೆ ಸಂಘದ ಉಸ್ತುವಾರಿಯನ್ನು ನೋಡಿಕೊಳ್ಳುವ ಅವಕಾಶ ನೀಡಬೇಕು ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದರು.
ಮಾಜಿ ಉಪಾಧ್ಯಕ್ಷರಾದ ಕರುಣಾಕರ್ ಶೆಟ್ಟಿಯವರು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಗುಣಪಾಲ್ ಶೆಟ್ಟಿಯವರು ಸಂಘದ ಏಳಿಗೆಯನ್ನು ಬಯಸಿ ಹಿತನುಡಿಗಳನ್ನಾಡಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಿವರಾಮ ಶೆಟ್ಡಿಯವರು ಸಂಘದ ಕಾರ್ಯಕ್ರಮಗಳಲ್ಲಿ ಎಲ್ಲಾ ತುಳು ಕನ್ನಡಿಗರು ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು..
ಮಹಿಳಾ ವಿಭಾಗದ ಸಾಂಸ್ಕೃತಿಕ ಮುಖ್ಯಸ್ಥೆ ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು ಇವರು ಹೊರನಾಡಿನಲ್ಲಿ ತುಳು ಕನ್ನಡಿಗರು ಒಟ್ಟಾಗಿ ಸಂಘಟಿತರಾಗಿ ,ಒಗ್ಗೂಡಿ ಕಷ್ಟ ,ಸುಖಗಳಿಗೆ ಭಾಗಿಯಾಗಬೇಕು ಎನ್ನುವ ಉದ್ಧೇಶದಿಂದ ಮತ್ತು ಸಮಾಜಕ್ಕಾಗಿ ಏನಾದರೂ ಸೇವೆ ಮಾಡುವ ಆಕಾಂಕ್ಷೆಯಿಂದ ಸಂಘವು ಸ್ಥಾಪಿಸಲ್ಪಡುತ್ತದೆ .ಎಲ್ಲಾ ಸದಸ್ಯ ಬಾಂಧವರು ಅದರಲ್ಲಿ ಭಾಗಿಯಾಗಬೇಕು ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದರು.
ಮಾಜಿ ಕಾರ್ಯದರ್ಶಿ ಸುಗಂಧಿ ಶೆಟ್ಟಿಯವರು ಸ್ವಂತ ಕಚೇರಿಗಾಗಿ ನಾವೆಲ್ಲರೂ ಒಗ್ಗೂಡಿ ಕೈ ಜೋಡಿಸೋಣ ಎಂದು ಹಿತನುಡಿಗಳನ್ನಾಡಿದರು.ರೇಖಾ ಶೆಟ್ಟಿಯವರು ಕೂಡಾ ಸಂಘದ ಒಳಿತಿಗೆ ಶುಭ ಹಾರೈಸಿದರು
.ವೇದಿಕೆಯಲ್ಲಿ ಸಂಘದ ಅಧ್ಯಕ್ಷರು ಜಯಂತ್ ಎನ್ ಶೆಟ್ಟಿ ಕಾರ್ಯದರ್ಶಿ ಶೇಖರ್ ಶೆಟ್ಟಿ ,ಕೋಶಾಧಿಕಾರಿ ಬಾಲಕೃಷ್ಣ ರೈ, ಜೊತೆ ಕಾರ್ಯದರ್ಶಿ ಶಕಿತಾ ಶೆಟ್ಟಿ ,ಜೊತೆ ಕೋಶಾಧಿಕಾರಿ ಚಂದ್ರಹಾಸ್ ಶೆಟ್ಟಿ,ಮಹಿಳಾ ಕಾರ್ಯಾಧ್ಯಕ್ಷೆ ವಿದ್ಯಾ ಆರ್.ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷರುಗಳಾದ ರತ್ನಾಕರ್ ಶೆಟ್ಟಿ ,ಸುನೀಲ್ ಜೆ.ಶೆಟ್ಟಿ , ಸಾಂಸ್ಕೃತಿಕ ಮುಖ್ಯಸ್ಥ ಮೋಹನ್ ಹೆಗ್ಡೆ , ಕ್ರೀಡಾ ಸಮಿತಿಯ ಮುಖ್ಯಸ್ಥರಾದ ಸುಕುಮಾರ್ ಶೆಟ್ಟಿ ಅಂಡಾರ್ , ಮೋಹಿನಿ ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದರು .
ಜೊತೆ ಕಾರ್ಯದರ್ಶಿ ಶಕಿತಾ ಶೆಟ್ಟಿಯವರು ಧನ್ಯವಾದ ಸಮರ್ಪಣೆಯನ್ನು ಮಾಡಿದರು..ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯಗೊಂಡಿತು..ಕೊನೆಗೆ ಲಘು ಉಪಾಹಾರದ ವ್ಯವಸ್ಥೆಯ ನ್ನು ಮಾಡಲಾಗಿತ್ತು.
.jpeg)
.jpeg)
Post a Comment